ನಿಮಗೆ ಅರ್ಥ ಆಗುತ್ತಾ..? ರಶ್ಮಿಕಾ ಸೌಂದರ್ಯ ರಹಸ್ಯ ಏನು ಅಂತಾ..?

ಎಲ್ಲರನ್ನು ಆಕರ್ಷಿಸುವ ಸೌಂದರ್ಯ, ಮುದ್ದು ಮುಖ, ಚೆಂದದ ನಟನೆಯಿಂದ ಕಡಿಮೆ ಸಮಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದು ನಟಿ ರಶ್ಮಿಕಾ ಮಂದಣ್ಣ. ಅದರಲ್ಲೂ ರಶ್ಮಿಕಾ ಅಂದಕ್ಕೆ, ಫಿಸಿಕ್‍ಗೆ ಫ್ಲಾಟಾದ ನೆಟ್ಟಿಗರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ.

ಗೀತಾಗೋವಿಂದಂ ಹಿಟ್ ಬಳಿಕ ಟಾಲಿವುಡ್‍ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಇದೀಗ ಸರಿಲೇರು ನೀಕೆವ್ವರು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್‍ನಿಂದ ಖುಷಿ ಆಗಿದ್ದಾರೆ. ಭಾನುವಾರ ಭೀಷ್ಮಾ ಟ್ರೈಲರ್ ರಿಲೀಸ್ ಆಗಿದ್ದು, ಇಲ್ಲಿಯೂ ಪ್ರಶಂಸೆ ಪಡೆಯುತ್ತಿದ್ದಾರೆ. ಇದೇ ಖುಷಿಯಲ್ಲಿ ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನಲ್ಲಿ ತಮ್ಮ ಸೌಂದರ್ಯದ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಬೆಳಗ್ಗೆ ಎದ್ದ ಕೂಡಲೇ..! ;
ಬೆಳಗ್ಗೆ ಎದ್ದ ಕೂಡಲೇ ಕನಿಷ್ಠ ಒಂದು ಲೀಟರ್ ಶುದ್ಧ ನೀರು ಕುಡಿಯುತ್ತೇನೆ

ತರಕಾರಿ ಇಷ್ಟವಿಲ್ಲ..
ಡಯೇಟಿಷಿಯನ್ ಸಲಹೆ ಮೇರೆಗೆ ಆಪಿಲ್ ಸಿಡೇರ್ ವೆನಿಗರ್ ಬಳಸಲು ಶುರು ಮಾಡಿದ್ದೇನೆ. ಇತ್ತೀಚಿಗೆ ಶಾಕಾಹಾರಿಯಾಗಿ ಬದಲಾಗಿದ್ದಾನೆ. ಆದರೆ, ಟೊಮ್ಯಾಟೋ, ಆಲೂಗಡ್ಡೆ, ದೋಸೆಕಾಯಿ, ಕ್ಯಾಪ್ಸಿಕಮ್ ನನಗೆ ಇಷ್ಟ ಆಗಲ್ಲ. ಇದರ ಜೊತೆಗೆ ಇನ್ನೊಂದಿಷ್ಟು ತರಕಾರಿ ತಿನ್ನಲು ಇಷ್ಟಪಡಲ್ಲ.

ಇಟಲಿಗೆ ಹೋದಾಗ..!
ಇತ್ತಿಚಿಗೆ ಶೂಟಿಂಗ್ ಸಲುವಾಗಿ ಇಟಲಿಗೆ ಹೋಗಿದ್ದ ಸಂದರ್ಭದಲ್ಲಿ ತರಕಾರಿ ತಿನ್ನಲು ಇಷ್ಟ ಆಗದೇ ಬರೀ ಐಸ್‍ಕ್ರೀಂ ತಿಂದು ಹಸಿವು ನೀಗಿಸಿಕೊಂಡೆ..

ಏನು ಇಷ್ಟ..!
ಸಾಮಾನ್ಯವಾಗಿ ದಕ್ಷಿಣ ಭಾರತೀಯ ಶೈಲಿಯ ಆಹಾರವನ್ನು ಇಷ್ಟಪಡುತ್ತೇನೆ. ಅದರಲ್ಲೂ ಅನ್ನ ಇರಲೇಬೇಕು. ದಾಲ್ಚಿನ್ನಿ ಬಳಸುತ್ತೇನೆ. ಬೆಳಗ್ಗೆ ಹೊತ್ತು ವರ್ಕೌಟ್ ಮಾಡಲು ಇಷ್ಟ. ಆದರೆ, ಇತ್ತೀಚಿಗೆ ಶೂಟಿಂಗ್‍ನಲ್ಲಿ ಬ್ಯುಸಿ ಇರುವ ಕಾರಣ ಸಂಜೆ ಹೊತ್ತು ವರ್ಕೌಟ್ ಮಾಡುತ್ತೇನೆ. ವರ್ಕೌಟ್ ನಂತರ ಕೋಳಿ ಮೊಟ್ಟೆಯಿಂದ ತಯಾರಿಸಿ ಆಹಾರ ತಿನ್ನುತ್ತೇನೆ.. ಇದೇ ನನ್ನ ಸೌಂದರ್ಯದ ರಹಸ್ಯ ಎನ್ನುತ್ತಾರೆ ಮುದ್ದು ಮೊಗದ ಚೆಲುವೆ ರಶ್ಮಿಕಾ ಮಂದಣ್ಣ.

LEAVE A REPLY

Please enter your comment!
Please enter your name here