ನಿಮಗಿದೋ ವಂದನೆ.. ಕೋವಿಡ್ ವಾರಿಯರ್ಸ್‍ಗೆ ಅಪರೂಪದ ಸೇನಾ ಗೌರವ

ಹೆಚ್ಚು ಕಡಿಮೆ ಕಳೆದ ನಾಲ್ಕು ತಿಂಗಳಿಂದ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ವಾರಿಯರ್ಸ್ ರೀತಿ ಅವಿರತ ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಭಾರತೀಯ ಸೇನೆಯಿಂದ ಅಪರೂಪದ ಗೌರವ ಸಿಕ್ಕಿದೆ. ದೇಶಾದ್ಯಂತ ಕೋವಿಡ್ ಆಸ್ಪತ್ರೆಗಳ ಆವರಣದಲ್ಲಿ ನಿಂತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ವಾಯುಪಡೆ ಹೆಲಿಕಾಪ್ಟರ್ ಮೂಲಕ ಹೂಮಳೆಗರೆದಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಕಮ್ಯಾಂಡೋ ಆಸ್ಪತ್ರೆಗಳ ಮೇಲೆ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಿ ಧನ್ಯವಾದ ಹೇಳಲಾಯಿತು.ಸೇನೆಯ ಈ ಉತ್ತೇಜಕ ಕ್ರಮಕ್ಕೆ ಕೋವಿಡ್ ವಾರಿಯರ್ಸ್ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು.

ಲಡಾಕ್‍ನ ಲೇಹ್‍ನಿಂದ ಹಿಡಿದು ಪಣಜಿಯ ಗೋವಾ ಮೆಡಿಕಲ್ ಕಾಲೇಜುವರೆಗೂ ಎಲ್ಲಾ ಕೋವಿಡ್ ಆಸ್ಪತ್ರೆ ಮತ್ತು ವಾರಿಯರ್ಸ್ ಮೇಲೆ ಮೇಲೆಯೂ ಪುಷ್ಪವೃಷ್ಟಿ ಸುರಿಸಲಾಯಿತು.

ಇದೇ ವೇಳೆ, ಭಾರತೀಯ ಸೇನೆಯ ಸಂಗೀತದ ಬ್ಯಾಂಡ್‍ಗಳು ಬೆಂಗಳೂರಿನ ವಿಧಾನಸೌಧ, ಎಂಜಿ ರಸ್ತೆ ಬಳಿಯಿರುವ ವಾರ್ ಮೆಮೋರಿಯಲ್ ಮುಂದೆ ಸಂಗೀತ ವಾದ್ಯಗಳನ್ನು ನುಡಿಸಿ ದೇಶವನ್ನು ಮಾರಕ ಸೋಂಕಿನಿಮದ ಕಾಪಾಡುತ್ತಿರುವ ಕೋವಿಡ್ ವಾರಿಯರ್ಸ್‍ಗೆ ಧನ್ಯವಾದ ಸಲ್ಲಿಸಿದವು.

LEAVE A REPLY

Please enter your comment!
Please enter your name here