ನಾಳೆ ಮೌನಿ ಅಮಾವಾಸ್ಯೆ – ಶನಿ ಮನೆ ಬದಲಾವಣೆ ಯಾವ ರಾಶಿಯಿಂದ ಯಾವ ರಾಶಿಗೆ..?

ನಾಳೆ ಶುಕ್ರವಾರ, ಜನವರಿ 24. ಹಿಂದೂ ಪಂಚಾಂಗದ ಪ್ರಕಾರ ಮಹತ್ವದ ದಿನ. ಹೌದು ನಾಳೆ ಮೌನಿ ಅಮವಾಸ್ಯೆ. ಈ ಅಮಾವಾಸ್ಯೆಯಂದು ಶನಿ ತನ್ನ ಸ್ಥಾನ ಬದಲಾಯಿಸಲಿದ್ದಾನೆ. ಈಗಿರುವ ರಾಶಿಯಿಂದ ಇನ್ನೊಂದು ರಾಶಿಗೆ ತನ್ನ ಮನೆಯನ್ನು ವರ್ಗಾಯಿಸಲಿದ್ದಾನೆ.

2017ರ ಜನವರಿ 26ರಿಂದ ಶನಿ ಧನುರ್‌ ರಾಶಿಯಲ್ಲಿದ್ದ. ನ್ಯಾಯದೇವತೆ ಎಂದೇ ಕರೆಸಿಕೊಳ್ಳುವ ಶನಿ ಬರೋಬ್ಬರೀ 30 ವರ್ಷಗಳ ಬಳಿಕ ಮೌನಿ ಅಮಾವಾಸ್ಯೆಯಂದೇ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಹೀಗಾಗಿ ಶನಿಯ ಮನೆ ಬದಲಾವಣೆ ಇನ್ನಷ್ಟು ಮಹತ್ವ ಪಡೆದುಕೊಳ್ಳಲಿದೆ.

ಶುಕ್ರವಾರ ನಸುಕಿನ ಜಾವ 2 ಗಂಟೆ 17 ನಿಮಿಷಕ್ಕೆ ಮೌನಿ ಅಮಾವಾಸ್ಯೆ ಆರಂಭವಾಗಲಿದ್ದು, ಜನವರಿ 25ರ ಶನಿವಾರ ನಸುಕಿನ ಜಾವ 3 ಗಂಟೆ 11 ನಿಮಿಷಕ್ಕೆ ಅಂತ್ಯವಾಗಲಿದೆ. ಸೂರ್ಯೋದಯಕ್ಕೂ ಮೊದಲೇ ಅಮಾವಾಸ್ಯೆ ಶುರುವಾಗುತ್ತಿರುವುದು ವಿಶೇಷ.

ನಾಳೆ ಮಧ್ಯಾಹ್ನ 12.10 ನಿಮಿಷಕ್ಕೆ ಮಕರ ರಾಶಿಗೆ ಶನಿ ಕಾಲಿಡಲಿದ್ದಾನೆ.

ಮಾಘ ತಿಂಗಳ ಅಮಾವಾಸ್ಯೆ ಇದಾಗಿದ್ದು ಈ ದಿನ ಮೌನ ವ್ರತ ಮಾಡಿದರೆ ಸಿಗುವ ಫಲ ನೂರು ಪಟ್ಟು ಹೆಚ್ಚು ಎಂಬ ನಂಬಿಕೆ ಇದೆ.

LEAVE A REPLY

Please enter your comment!
Please enter your name here