ನಾಳೆಯಿಂದ ಬೆಂಗಳೂರು, ಬೆಳಗಾವಿ – ಮೈಸೂರು ನಡುವೆ ವಿಮಾನ ಹಾರಾಟ ಶುರು

ನಾಳೆಯಿಂದ ದೇಶದಲ್ಲಿ ದೇಶೀಯ ವಿಮಾನಗಳು ಅಂದರೆ ದೇಶದೊಳಗಷ್ಟೇ ವಿಮಾನಗಳ ಹಾರಾಟ ಆರಂಭವಾಗಲಿದೆ. ನಾಳೆಯಿಂದ ಮೈಸೂರಿಗೆ ಬೆಂಗಳೂರು ಮತ್ತು ಬೆಳಗಾವಿಯಿಂದ, ಬೆಂಗಳೂರು ಮತ್ತು ಬೆಳಗಾವಿಗೆ ಮೈಸೂರಿನಿಂದ ವಿಮಾನಗಳು ಹಾರಾಟ ನಡೆಸಲಿವೆ.

ಅಲಯನ್ಸ್‌ ಏರ್‌ ಮತ್ತು ಟ್ರೂ ಜೆಟ್‌ನ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಬೆಂಗಳೂರಿನಿಂದ ಸಂಜೆ 4.30ಕ್ಕೆ ಹಾರಾಟ ನಡೆಸಲಿರುವ ವಿಮಾನ ಮೈಸೂರಿಗೆ ಸಂಜೆ 5.30ಕ್ಕೆ ಆಗಮಿಸಲಿದೆ. ಮೈಸೂರಿನಿಂದ ಸಂಜೆ 6.15ಕ್ಕೆ ಹೊರಡಲಿರುವ ವಿಮಾನ ಬೆಂಗಳೂರಿಗೆ ಸಂಜೆ 7.15ಕ್ಕೆ ತಲುಪಲಿದೆ.

ಮೈಸೂರಿನಿಂದ ಬೆಂಗಳೂರಿಗೆ ಮಂಗಳವಾರ ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ ವಿಮಾನ ಹಾರಾಟ ನಡೆಸಲಿದೆ.

ಬೆಳಗಾವಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿರುವ ವಿಮಾನಗ ಮೈಸೂರಿಗೆ ಸಂಜೆ 4.20 ಆಗಮಿಸಲಿದೆ. ಸಂಜೆ 4.55ಕ್ಕೆ ಹೊರಡಲಿರುವ ವಿಮಾನ ಬೆಳಗಾವಿಗೆ ಸಂಜೆ 6.15ಕ್ಕೆ ಆಗಮಿಸಲಿದೆ.

LEAVE A REPLY

Please enter your comment!
Please enter your name here