ನಾಳೆಯಿಂದ ಪ್ಯಾಸೆಂಜರ್‌ ರೈಲು ಸೇವೆ ಆರಂಭ – ಯಾವ ನಗರಗಳಿಗೆ ರೈಲು ಓಡಾಟ..?

ದೇಶದಲ್ಲಿ ಲಾಕ್‌ಡೌನ್‌ ನಡುವೆಯೇ ನಾಳೆಯಿಂದ ಪ್ಯಾಸೆಂಜರ್‌ ರೈಲು ಸಂಚಾರ ಆರಂಭವಾಗಲಿದೆ. ಲಾಕ್‌ ಡೌನ್‌ ಮುಗಿಯುವುದಕ್ಕೆ ಇನ್ನೂ ಒಂದು ವಾರ ಬಾಕಿ ಇರುವಂತೆ ಪ್ಯಾಸೆಂಜರ್‌ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ಆದರೆ ಈ 15 ರೈಲುಗಳ ಕೇವಲ ಏಸಿ ಕೋಚ್‌ ಇರುವ ರೈಲುಗಳು ಆಗಿರಲಿವೆ. ರಾಜಧಾನಿ ಎಕ್ಸ್‌ಪ್ರೆಸ್‌ಗೆ ನೀಡಲಾಗುವ ಟಿಕೆಟ್‌ ಮೊತ್ತವನ್ನೇ ಪ್ರಯಾಣಿಕರು ಭರಿಸಬೇಕಾಗುತ್ತದೆ.

ಮೇ 12 ರಿಂದ ಆಯ್ದ ನಗರಗಳಿಂದ- ಬೆಂಗಳೂರು, ದೆಹಲಿ, ತಿರುವನಂತಪುರಂ, ದಿಬ್ರುಘಡ್‌, ಅಗರ್ತಲ, ರಾಂಚಿ, ಪಾಟ್ನಾ, ಹೌರಾ, ಬಿಲಾಸ್ಪುರ್‌, ಚೆನ್ನೈ, ಮಡಗಾಂವ್‌, ಅಹಮದಾಬಾದ್‌, ಜಮ್ಮು ತಾವಿ,ಮುಂಬೈ ಸೆಂಟ್ರಲ್‌,ಭುವನೇಶ್ವರ್‌ಗೆ ಪ್ಯಾಸೆಂಜರ್ ರೈಲು ಸೇವೆ ಆರಂಭವಾಗಲಿದೆ.

ಒಟ್ಟು 15 ರೈಲುಗಳು (30 ಜೋಡಿ ಸಂಚಾರ ಅಂದರೆ ಹೋಗಿ ಬರುವುದು) ನಾಳೆಯಿಂದ ಸಂಚಾರ ಆರಂಭಿಸಲಿವೆ.

ರೈಲ್ವೆ ಸಚಿವಾಲಯ ನೀಡಿದ ಪ್ರಮುಖ ಸೂಚನೆಗಳು :

  • ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರಗಷ್ಟೇ ಓಡಾಡಲು ಅವಕಾಶ ನೀಡಲಾಗಿದೆ.
  • ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ವಿತರಣೆ ಇರುವುದಿಲ್ಲ, ಹೀಗಾಗಿ ಕೇವಲ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದ ಪ್ರಯಾಣಿಕರಿಗಷ್ಟೇ ಸಂಚಾರಕ್ಕೆ ಅವಕಾಶ.
  • ಇವತ್ತು ಸಂಜೆ ನಾಲ್ಕರಿಂದ ಐಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು. ಪ್ಲ್ಯಾಟ್‌ಫಾರಂ ಟಿಕೆಟ್‌ ಕೂಡಾ ಇರುವುದಿಲ್ಲ.
  • ರಾಜಧಾನಿ ಎಕ್ಸ್‌ ಪ್ರೆಸ್‌ ದರದಷ್ಟೇ ಈ ರೈಲುಗಳ ದರವೂ ಇರುತ್ತದೆ.
  • ಧೃಡೀಕೃತ ಟಿಕೆಟ್‌ ಇರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಅವಕಾಶವಿರುತ್ತದೆ.

LEAVE A REPLY

Please enter your comment!
Please enter your name here