ನಾಳೆಯಿಂದ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಬೇಕು – ಕರ್ನಾಟಕ ಸರ್ಕಾರದ ಆದೇಶ

ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ನಾಳೆಯಿಂದ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ನಾಳೆಯಿಂದ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸಹಜ ಸ್ಥಿತಿ ಬರಲಿವೆ.

ಎ, ಬಿ, ಸಿ, ಡಿ ಗ್ರೂಪ್‌ನ ಎಲ್ಲಾ ನೌಕರರು ನಾಳೆಯಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ- ಮಂಡಳಿಗಳಲ್ಲಿನ ಎಲ್ಲಾ ನೌಕರರಿಗೆ ಈ ಆದೇಶ ಅನ್ವಯ ಆಗುತ್ತದೆ.

ಈ ಹಿಂದೆ ಅಗತ್ಯ ಸೇವೆಗಳಲ್ಲಿರುವ ಎ ಬಿ ಸಿ ಮತ್ತು ಡಿ ಗ್ರೂಪ್‌ನ ಎಲ್ಲಾ ನೌಕರರು ಲಾಕ್‌ಡೌನ್‌ ಹೊತ್ತಲ್ಲೂ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯವಲ್ಲದ ಸೇವೆಗಳಲ್ಲಿರುವ ನೌಕರರ ಹಾಜರಾತಿ ಸಂಖ್ಯೆಯನ್ನು ಶೇಕಡಾ 33ಕ್ಕೆ ಇಳಿಸಿ ಆದೇಶ ಹೊರಡಿಸಲಾಗಿತ್ತು. ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಈ ಆದೇಶ ನೀಡಲಾಗಿತ್ತು.

ಆದ್ರೆ ನಾಳೆಯಿಂದ ರಾಜ್ಯಾದ್ಯಂತ ಹೊಸ ಲಾಕ್‌ಡೌನ್‌ ಮಾರ್ಗಸೂಚಿ ಜಾರಿ ಆಗಿ ವಿನಾಯ್ತಿ ಕೊಟ್ಟಿರುವ ಕಾರಣ ಎಲ್ಲರಿಗೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here