ನಾಳೆಯಿಂದ ಇವೆಲ್ಲವೂ ಇರುತ್ತೆ…! – ಲಾಕ್‌ಡೌನ್‌ನಿಂದ ರಿಲೀಫ್‌ – ಇಲ್ಲಿದೆ ಸಂಪೂರ್ಣ ಮಾಹಿತಿ

ಮೇ 31ರವರೆಗೆ ಲಾಕ್‌ಡೌನ್‌ ಮುಂದುವರಿದರೂ ಈ ಹಿಂದಿನ ಮೂರು ಲಾಕ್‌ಡೌನ್‌ನಷ್ಟು ಹೊಸ ಲಾಕ್‌ಡೌನ್‌ ಬಿಗಿ ಆಗಿಲ್ಲ. ಅದರಲ್ಲೂ ಕೇವಲ ಕಂಟೈನ್‌ಮೆಂಟ್‌ಝೋನ್‌ಗಷ್ಟೇ ನಾಳೆಯಿಂದ ಬಿಗಿ ಲಾಕ್‌ಡೌನ್‌ ಇರಲಿದೆ. ಕಂಟೈನ್‌ಮೆಂಟ್‌ಝೋನ್‌ ಬಿಟ್ಟು ರೆಡ್‌, ಆರೆಂಜ್‌, ಗ್ರೀನ್‌ಝೋನ್‌ ಜಿಲ್ಲೆಗಳಲ್ಲಿ ಎಲ್ಲದ್ದಕ್ಕೂ ಅವಕಾಶ ನೀಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಇನ್ನೊಂದು ಅರ್ಥದಲ್ಲಿ ಹೇಳುವುದಾದ್ರೆ ಕರ್ನಾಟಕ ಸಹಜ ಸ್ಥಿತಿಗೆ ಬರಲಿದೆ.

ಆದ್ರೆ ನಿರ್ಬಂಧ ತೆಗೆದಿರುವ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಕಂಟೈನ್‌ಮೆಂಟ್‌ಝೋ, ಬಫರ್‌ಝೋನ್‌, ರೆಡ್‌ಝೋನ್‌, ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ ಜಿಲ್ಲೆಗಳನ್ನು ನಿರ್ಧರಿಸಲು ಸ್ವತಂತ್ರವಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಆಧರಿಸಿ ರಾಜ್ಯಗಳೇ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯ ಬಳಿಕ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಟವಾಗಲಿದೆ.

ಈ ಹಿನ್ನೆಲೆಯಲ್ಲಿ ನಾಳೆಯವರೆಗೆ ಮೂರನೇ ಲಾಕ್‌ಡೌನ್ ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಮುಂದುವರಿಯಲಿವೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದಕ್ಕೂ ಮೊದಲು ರಾಜ್ಯ ಸರ್ಕಾರ ಸಂಜೆಯ ವೇಳೆ 2 ದಿನದ ಮಟ್ಟಿಗೆ ಅಂದರೆ ಮೇ 19ರ ಮಂಗಳವಾರ ಮಧ್ಯರಾತ್ರಿವರೆಗೂ ಮೂರನೇ ಲಾಕ್‌ಡೌನ್‌ ಮಾರ್ಗಸೂಚಿಯಲ್ಲೇ ಲಾಕ್‌ಡೌನ್‌ ವಿಸ್ತರಿಸಿತ್ತು. ಆದ್ರೆ ಸಂಜೆ 7 ಗಂಟೆಗೆ ಹೊಸ ಮಾರ್ಗಸೂಚಿ ಹೊರಬೀಳುತ್ತಿದ್ದಂತೆ 2 ದಿನದ ಮಟ್ಟಿಗೆ ಲಾಕ್‌ಡೌನ್‌ ವಿಸ್ತರಣೆಯ ಆದೇಶವನ್ನು ಹಿಂಪಡೆಯಿತು.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಯಾವುದಕ್ಕೆಲ್ಲ ಅವಕಾಶ ನೀಡಲಾಗಿದೆ ಎನ್ನುವುದರ ಪಟ್ಟಿ ಇಲ್ಲಿದೆ. ರೈಲು, ವಿಮಾನ ಹೊರತುಪಡಿಸಿ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ, ಎಲ್ಲಾ ರೀತಿಯ ಅಂಗಡಿಗಳು, ಎಲ್ಲಾ ರೀತಿಯ ಮಾರ್ಕೆಟ್‌, ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.

ರಾಜ್ಯದಲ್ಲಿ ಜನರು ಜಿಲ್ಲೆಗಳ ನಡುವೆ, ಜಿಲ್ಲೆಗಳ ಒಳಗೆ ಓಡಾಟ ಮಾಡಬಹುದು. ರಾಜ್ಯ-ರಾಜ್ಯಗಳ  ನಡುವೆಯೂ ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ ಸಿಕ್ಕಿದೆ.

ಆದರೆ ಕಂಟೈನ್‌ಮೆಂಟ್‌ಝೋನ್‌ಗಳಲ್ಲಿ ಮಾತ್ರ ಯಾವುದೇ ರಿಲೀಫ್‌ ಇರಲ್ಲ. ಲಾಕ್‌ಡೌನ್‌ ಕೇವಲ ಕಂಟೈನ್‌ಮೆಂಟ್‌ಝೋನ್‌ಗಷ್ಟೇ ಸೀಮಿತವಾಗಿರುತ್ತದೆ. ಜೊತೆಗೆ ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಸಂಚಾರ ಮಾಡುವಂತಿಲ್ಲ ಎಂಬ ನಿರ್ಬಂಧ ಮುಂದುವರಿಕೆ ಆಗಿದೆ.

1. ಖಾಸಗಿ, ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅವಕಾಶ

2. ಜಿಲ್ಲೆಗಳು, ಜಿಲ್ಲೆಗಳ ನಡುವೆ ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ

3. ಆಟೋ, ಕ್ಯಾಬ್‌, ಟ್ಯಾಕ್ಸಿಗಳ ಓಡಾಟಕ್ಕೂ ಅವಕಾಶ

4. ಓಲಾ, ಊಬರ್‌ ಸೇವೆಗೂ ಅನುಮತಿ

5. ವಾಣಿಜ್ಯ ಸಂಕೀರ್ಣ, ವಸತಿ ಸಂಕೀರ್ಣದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ

6. ಎಲ್ಲಾ ರೀತಿಯ ಅಂಗಡಿ, ಮಾರ್ಕೆಟ್‌ಗಳನ್ನು ತೆರೆಯಬಹುದು

7. ಬೀದಿಬದಿ ವ್ಯಾಪಾರಕ್ಕೂ ಅನುಮತಿ

8. ಎಲ್ಲಾ ರೀತಿಯ ಕೈಗಾರಿಕೆಗಳು, ಕಾರ್ಖಾನೆಗಳನ್ನು ತೆರೆಯಲು ಅನುಮತಿ

9. ಐಟಿ ಬಿಟಿ ಕಂಪನಿಗಳು, ಹಾರ್ಡ್‌ವೇರ್‌ ಅಂಗಡಿ ತೆರೆಯಬಹುದು

10. ಎಲ್ಲಾ ರೀತಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ತೆರೆಯಬಹುದು

11. ಬಸ್‌ ಡಿಪೋ, ರೈಲ್ವೆ ಸ್ಟೇಷನ್‌, ಸರ್ಕಾರಿ ಕಚೇರಿ ಮತ್ತು ಅಗತ್ಯ ಸೇವೆಗಳ ಸ್ಥಳಗಳಲ್ಲಿರುವ ಕ್ಯಾಂಟೀನ್‌ ತೆರೆಯಲು ಅವಕಾಶ

12. ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ ಕೊಂಡೊಯ್ಯಲು ಅನುಮತಿ

13. ಸ್ಟೇಡಿಯಂ ತೆರೆಯಬಹುದು, ಆದ್ರೆ ಜನ ಸೇರುವಂತಿಲ್ಲ

14. ಸಲೂನ್‌, ಬ್ಯೂಟಿ ಪಾರ್ಲರ್‌, ಸ್ಪಾ ತೆರೆಯಬಹುದು

15. ಕಟ್ಟಡ, ರಸ್ತೆ, ನೀರಾವರಿ ಕಾಮಗಾರಿಗಳಿಗೆ ಅನುಮತಿ

16. ಐಸ್‌ಕ್ರೀಮ್‌ ಪಾರ್ಲರ್‌, ಬುಕ್‌ ಸ್ಟೋರ್‌, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ ತೆರೆಯಬಹುದು

17. ‌ಪೇಂಟ್‌, ಸಿಮೆಂಟ್‌, ಕಬ್ಬಿಣ ಮಾರುವ ಅಂಗಡಿಗಳನ್ನು ತೆರಯಬಹುದು

18. ಮೊಬೈಲ್‌, ಕಾರು, ಬೈಕ್‌ ಶೋ ರೂಂ, ಗ್ಯಾರೇಜ್‌ಗಳನ್ನು ಓಪನ್‌ ಮಾಡಬಹುದು

19. ಕೃಷಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳೂ, ಅಂಗಡಿಗಳು, ಮಾರ್ಕೆಟ್‌ಗಳನ್ನು ತೆರೆಯಲು ಅನುಮತಿ

ನಿಷೇಧದ ಪಟ್ಟಿಯಲ್ಲಿರುವ ಚಟುವಟಿಕೆಗಳನ್ನು ಬಿಟ್ಟು ಉಳಿದೆಲ್ಲದ್ದಕ್ಕೂ ನಾಳೆಯಿಂದ ಸಂಪೂರ್ಣ ಅನುಮತಿ ಸಿಕ್ಕಿದೆ. ಆದ್ರೆ ಹೊಸ ಲಾಕ್‌ಡೌನ್‌ನಲ್ಲಿ ರಿಲೀಫ್‌ ನೀಡಲಾಗಿರುವ ಚಟುವಟಿಕೆಗೆ ಅವಕಾಶ ಕೊಡಬೇಕೇ ಬೇಡವೇ ಎನ್ನುವುದು ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು.

ಮೇ 31ರವರೆಗೂ ದೇಶಾದ್ಯಂತ ಇವೆಲ್ಲವೂ ಬಂದ್‌ – ರಿಲೀಫ್‌ ಸಿಗೋದೇ ಇಲ್ಲ..!

LEAVE A REPLY

Please enter your comment!
Please enter your name here