ನಾಳೆಯಿಂದಲೇ ರೈಲು ಟಿಕೆಟ್ ದರ ಹೆಚ್ಚಳ- ಎಷ್ಟು..?

ಹೊಸ ವರ್ಷ ಜನವರಿ ಒಂದರಿಂದ ಅಂದರೆ ನಾಳೆಯಿಂದ ಜಾರಿಗೆ ಬರುವಂತೆ ರೈಲು ಪ್ರಯಾಣ ದರದಲ್ಲಿ ಏರಿಕೆಯಾಗಿದೆ.

ಎಕ್ಸ್ಪ್ರೆಸ್ ನಾನ್ ಎಸಿ ರೈಲುಗಳ ಟಿಕೆಟ್ ದರ ಪ್ರತಿ ಕಿಲೋಮೀಟರ್ಗೆ 2 ಪೈಸೆಯಂತೆ ಹೆಚ್ಚಳವಾಗಿದೆ. ಎಸಿ ಟಿಕೆಟ್ ದರ ಪ್ರತಿ ಕಿಲೋಮೀಟರಿಗೆ 4 ಪೈಸೆಯಂತೆ ಏರಿಕೆಯಾಗಿದೆ.

ಪ್ರೀಮಿಯಂ ರೈಲು ಗಳಾದ ಶತಾಬ್ದಿ ರಾಜಧಾನಿ, ದುರಂತೋ ರೈಲುಗಳ ಪ್ರಯಾಣ ದರದಲ್ಲಿ ಪ್ರತಿ ಕಿಲೋಮೀಟರ್ಗೆ 4 ಪೈಸೆಯಂತೆ ಹೆಚ್ಚಳವಾಗಿದೆ.

ಆದರೆ ಈಗಾಗಲೇ ಬುಕ್ ಮಾಡಿರುವ ಟಿಕೆಟ್ಗಳು ದರದಲ್ಲಿ ಯಾವುದೇ ಬದಲಾವಣೆ ಇರಲ್ಲ.

ಉಪನಗರಿ ರೈಲುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

LEAVE A REPLY

Please enter your comment!
Please enter your name here