ನಾಳೆಯಿಂದಲೇ ಶೂಟಿಂಗ್‌ ಆರಂಭಕ್ಕೆ ಅನುಮತಿ

ಮನುಷ್ಯನ ಬ್ಯುಝಿ ಜೀವನದಲ್ಲಿ ಕಿರುತೆರೆ ರಿಲ್ಯಾಕ್ಸ್‌ ನೀಡುವಂತಹ ಒಂದು ಮಾಧ್ಯಮ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಲ್ಲಿ ಕೆಲ ವರ್ಗದ ಜನರಿಗೆ ಇದು ಜೀವನದ ಒಂದು ಭಾಗವಾಗಿಬಿಟ್ಟಿತ್ತು.

ಆದರೆ, ಸುದೀರ್ಘ ಲಾಕ್‌ಡೌನ್‌‌ ಕಿರುತೆರೆಯ ಮೇಲೂ ಪರಿಣಾಮ ಬೀರಿ ಸಿನಿಮಾದಂತೆ ಕಿರುತೆರೆಯೂ ನಲುಗಿ ಹೋಗಿತ್ತು. ಹಿಂದೆ ಪ್ರಸಾರವಾದ ಸೀರಿಯಲ್‌ಗಳು, ರಿಯಾಲಿಟಿ ಶೋಗಳನ್ನು ಮತ್ತೆ ಪ್ರಸಾರ ಮಾಡಲಾರಂಭಿಸಿದ್ದವು.

ಇದೀಗ ಕಿರುತೆರೆ ಮಂದಿಗೆ ರಿಲ್ಯಾಕ್ಸ್‌ ಸಿಕ್ಕಿದಂತಾಗಿದೆ, ಇಂದು ಕಂದಾಯ ಸಚಿವ ಆರ್.ಅಶೋಕ್ ಸೀರಿಯಲ್ ಗಳ‌ ಒಳಾಂಗಣ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.

ಸಿನಿಮಾ ಹಾಗೂ ರಿಯಾಲಿಟಿ ಶೋ ಚಿತ್ರೀಕರಣದ ಅವಕಾಶಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.

LEAVE A REPLY

Please enter your comment!
Please enter your name here