ನಾನು ದಾಖಲೆ ಕೊಡಲ್ಲ – ಪ್ರಧಾನಿ ಮೋದಿ ಸರ್ಕಾರಕ್ಕೆ ಡಿಕೆಶಿ ಸವಾಲು

ಎನ್‌ಆರ್‌ಸಿಗೆ ನಾವು ಯಾವುದೇ ದಾಖಲೆ ಕೊಡುವುದಿಲ್ಲ, ಬೇಕಾದರೆ ನನ್ನ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಸ್ವಕ್ಷೇತ್ರ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಮಾತಾಡಿದ ಡಿಕೆಶಿ ಮಂಗಳೂರಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್‌ ಸಂಬಂಧ ಕಿಡಿಕಾರಿದರು.

ಎಫ್‌ಐಆರ್‌ ಹಾಕುವುದಾದ್ರೆ ಸಿಎಂ, ಗೃಹ ಸಚಿವರ ವಿರುದ್ಧ ಹಾಕಬೇಕು. ಪಾಪ ಪ್ರತಿಭಟನೆ ಮಾಡ್ತೀವಿ ಎಂದು ಅರ್ಜಿ ಕೊಟ್ರೆ ಪೊಲೀಸರ ಮೂಲಕ ಎಫ್‌ಐಆರ್‌ ಹಾಕಿಸ್ತೀರಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಕೆಲಸವನ್ನು ಸಹಿಸಿಕೊಂಡಿರಲು ಹೇಗೆ ಸಾಧ್ಯ..? ಯಡಿಯೂರಪ್ಪನವರೇ ನೀವು ಪೊಲೀಸರನ್ನ ಗುಲಾಮರಂತೆ ಉಪಯೋಗಿಸಿಕೊಳ್ಳಬಹುದು. ಆದರೆ ನಾವು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಅವರ ಪಾಡಿಗೆ ಘೋಷಣೆ ಕೂಗಿಕೊಂಡು ಪ್ರತಿಭಟನೆ ಮಾಡಿಕೊಂಡು ಹೋಗುತ್ತಿದ್ರು. ನಿಮಗೆ ನಿಷೇಧಾಜ್ಞೆ ಹೇರಿ ಎಂದು ಹೇಳಿದ್ದು ಯಾರು..? ಯಾರು ಸಮಾರಂಭ ಮಾಡಬಾರದಾ..? ಪ್ರತಿಭಟನೆ ಮಾಡಬಾರದಾ..? ಧ್ವನಿ ಎತ್ತಬಾರದಾ..? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ

ಗುಂಡು ಸರಿಯಾಗಿ ಹೊಡೆಯೋ ಎಂದ ಪೊಲೀಸರ ವಿರುದ್ಧ ಎಫ್‌ಐಆರ್‌ ಹಾಕುವುದಲ್ಲ, ಎಫ್‌ಐಆರ್‌ ಹಾಕುವುದಾದ್ರೆ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಹಾಕಬೇಕು. ಇದಕ್ಕೆಲ್ಲ ನೀವೇ ಕಾರಣ. ನೀವೇ ಆದೇಶ ಕೊಟ್ಟು ಜನರ ಭಾವನೆಯನ್ನು ಕೆರಳಿಸಿ ಸಮಾಜವನ್ನು ಹಾಳು ಮಾಡಲು ಹೋಗಿದ್ದೀರಲ್ಲ ಎಂದು ಡಿಕೆಶಿ ಗುಡುಗಿದ್ದಾರೆ

LEAVE A REPLY

Please enter your comment!
Please enter your name here