ನಾತಿಚರಾಮಿ ಚಿತ್ರಕ್ಕೆ ಸಧ್ಯಕ್ಕೆ ಪ್ರಶಸ್ತಿ ಭಾಗ್ಯ ಇಲ್ಲ..!

2018 ನೇ ಸಾಲಿನಲ್ಲಿ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಕನ್ನಡದ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಬಾರದು ಎಂದು ಸಿಟಿ ಸಿವಿಲ್ ಕೋರ್ಟ್  ಮಹತ್ವದ ಮಧ್ಯಂತರ ಆದೇಶ ನೀಡಿದೆ.

 ಚಲನಚಿತ್ರ ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವವರೆಗೂ ಅವಾರ್ಡ್ ನೀಡಬಾರದು ಎಂದು ಮಧ್ಯಂತರ ಆದೇಶ 5ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಧೀಶ ಸಿ.ಡಿ. ಕರೋಶಿಯಿಂದ ಆದೇಶ.

ಘಟನೆಯ ಹಿನ್ನೆಲೆ : ನಾತಿಚರಮಿ ಚಿತ್ರಕ್ಕೆ ನೀಡಿದ್ದ ಪ್ರಶಸ್ತಿ ಪ್ರಶ್ನಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು, ಈ ಚಿತ್ರಕ್ಕೆ 5 ರಾಷ್ಟ್ರ ಪ್ರಶಸ್ತಿ  ದೊರೆತ ವಿವಾದಕ್ಕೆ ಸಂಬಂಧ ಪಟ್ಟಂತೆ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಬಿ.ಎಸ್‌ ಲಿಂಗದೇವರು ವಿರುದ್ಧ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದ ನಟ, ನಿರ್ದೇಶಕ ದಯಾಳ್‌ ಪದ್ಮನಾಭನ್.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಯಾವ ವ್ಯಕ್ತಿಗೂ ಚಲನಚಿತ್ರಕ್ಕೂ ಸಂಬಂಧವಿರಬಾರದು. ಆದರೆ ಆಯ್ಕೆ ಸಮಿತಿಯಲ್ಲಿದ್ದ ಓರ್ವ ಸದಸ್ಯರಿಗೂ ನಾತಿಚರಮಿ ಚಿತ್ರಕ್ಕೂ ನೇರವಾದ ಸಂಬಂಧ ಇದೆ ಮತ್ತು ಈ ಕ್ರಮ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ  ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. 

 

LEAVE A REPLY

Please enter your comment!
Please enter your name here