ನಯನತಾರಾ ಹೊಸ ವರ್ಷದ ಆಚರಣೆಯ ಫೋಟೋಗಳಲ್ಲಿ ಗೆಳೆಯ ವಿಘ್ನೇಶ್  ಕಾಣೆ..!

ದಕ್ಷಿಣ ಭಾರತದ ಸಿನೆಮಾದ ಪ್ರಮುಖ ನಟಿಯರಲ್ಲಿ ಒಬ್ಬರಾದ ನಯನತಾರಾ ಹೊಸ ವರ್ಷದಲ್ಲಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ
ಮತ್ತು ಅವರ ಪ್ರವಾಸದ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಆದರೆ, ಆಕೆಯ ಬಹುಕಾಲದ ಗೆಳೆಯ ವಿಘ್ನೇಶ್ 
ಶಿವನ್ ಸಂಭ್ರಮಾಚರಣೆಯ ಚಿತ್ರಗಳಿಂದ ಕಾಣೆಯಾಗಿದ್ದಾರೆ.

ಇತ್ತೀಚೆಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಟ್ಟಿಗೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದು, ವಿಘ್ನೇಶ್ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಈ ದಂಪತಿಗಳು ಇತ್ತೀಚೆಗೆ ಹಲವಾರು ಆಧ್ಯಾತ್ಮಿಕ ಪ್ರವಾಸಗಳನ್ನು ಸಹ ಮಾಡುತ್ತಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಾಟ್ ಫೇವರಿಟ್ ದಂಪತಿಗಳು. ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ‘ನಾನಮ್ ರೌಡಿ ಧಾನ್’ ಚಿತ್ರಕ್ಕಾಗಿ ಮೊದಲ ಬಾರಿಗೆ ನಟಿಸಿದ್ದರು ಮತ್ತು ಆ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರಿಬ್ಬರಿಗೆ ಪ್ರೇಮಾಂಕುರವಾಗಿತ್ತು.

ನಯನತಾರಾ ಪ್ರಸ್ತುತ ತಮ್ಮ ಮುಂದಿನ ಚಿತ್ರ ‘ದರ್ಬಾರ್’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಜನವರಿ 9 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ನಟಿಸಿದ್ದಾರೆ.

ದರ್ಬಾರ್‌ ಚಿತ್ರದ ದೃಶ್ಯ

LEAVE A REPLY

Please enter your comment!
Please enter your name here