ಕೇರಳ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣವೇನು? ಇದಕ್ಕೆ ಉತ್ತರ ಇಷ್ಟೇ ಇದಕ್ಕಿಂತ ಮುಂಚೆ ಕೇರಳದಲ್ಲಿ ನಿಫಾ, ಮಲೇರಿಯಾ, ಡೆಂಗು, ಕೋಳಿ ಜ್ವರ ಮುಂತಾದ ರೋಗಗಳು ಅತಿ ಹೆಚ್ಚು ಕಾಣಿಸಿಕೊಂಡಿದೆ ಮತ್ತು ನಿಯಂತ್ರಣ ತರುವಲ್ಲಿ ಯಶಸ್ವಿಯಾಗಿದೆ.
ಆದ್ದರಿಂದ ಕೇರಳ ಸರ್ಕಾರಕ್ಕೆ ಕೊರೊನ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡಬೇಕಾದ ಅವಶ್ಯಕತೆ ಬಂದಿಲ್ಲ ಮತ್ತು ಇಂತಹ ಸಮುದಾಯಿಕವಾಗಿ ಹರಡುವ ರೋಗಗಳನ್ನು ನಿಯಂತ್ರಣ ಮಾಡಿದ ಅನುಭವ ಕೂಡ ಕೇರಳ ಸರ್ಕಾರಕ್ಕೆ ಇದೆ.
ಆದರೆ ಈ ರೀತಿಯಾಗಿ ಸೋಂಕು ನಿಯಂತ್ರಿಸುವ ಅನುಭವ ಬೇರೆ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಈ ರೀತಿಯಾಗಿ ಕೇರಳ ರಾಜ್ಯ ದೇಶದಲ್ಲಿ ಮಾದರಿ ರಾಜ್ಯವಾಗಿದೆ.
ಕೇರಳದಲ್ಲಿ ‘ಬ್ರೇಕ್ ದಿ ಚೈನ್’ನಂಥ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸಲಾಯಿತು
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ಪ್ರೇರೇಪಿಸಲಾಯಿತು. ಪ್ರತಿಯೊಂದರಲ್ಲಿ ಕೇರಳಿಗರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಸೋಂಕು ಹರಡುವ ವೇಗ ತಗ್ಗಿತು.
ಅಷ್ಟು ಮಾತ್ರವಲ್ಲದೆ ಕೇರಳ ರಾಜ್ಯದ ಪ್ರತಿಯೊಬ್ಬ ಜನಸಮುದಾಯವು ಪೂರ್ತಿ ಸಹಕಾರದೊಂದಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ್ದಾರೆ.
ಬೇರೆ ರಾಜ್ಯಗಳ ಹಾಗೆ ಜನಗಳು ಅಸಹಕಾರ ತೋರಿಸಲಿಲ್ಲ.ಪರಿಹಾರದ ಜೊತೆಗೆ ಸೋಂಕು ನಿಯಂತ್ರಣ ಮಾಡುವ ಅನುಭವವಿದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬುವುದನ್ನು ಕೇರಳ ರಾಜ್ಯ ನಮಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾಗಿದೆ.
-ವಾಲ್ಸ್ ಮಸ್ಕರೇನ್ಹಸ್