ನಮ್ಮಿಬ್ಬರ ಸಾಮೀಪ್ಯ ಎಂಥಾದ್ದು ಗೊತ್ತಾ..? – ನಟಿ ಸ್ವೀಟಿ ಅನುಷ್ಕಾ ಶೆಟ್ಟಿ

ಟಾಲಿವುಡ್ ಅಂಗಳದಲ್ಲಿ ಈಗಲೂ ಟಾಪ್ ಹೀರೋಯಿನ್‍ಗಳ ಪೈಕಿ ಒಬ್ಬರಾದ ಕುಡ್ಲ ಸುಂದರಿ ನಟಿ ಅನುಷ್ಕಾ ಶೆಟ್ಟಿ, ಇದೇ ಮೊದಲ ಬಾರಿಗೆ ಡಾರ್ಲಿಂಗ್ ಪ್ರಭಾಸ್ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಹೇಗಿದೆ..? ಇಬ್ಬರ ಸಂಬಂಧದದ ಬಗ್ಗೆ ಯಾಕಿಷ್ಟು ವದಂತಿಗಳು ಹಬ್ಬುತ್ತಿವೆ ಎಂಬ ಬಗ್ಗೆಯೂ ಅನುಷ್ಕಾ ಶೆಟ್ಟಿ ಮನಬಿಚ್ಚಿ ಮಾತನಾಡಿದ್ದಾರೆ.

ನನಗೆ ಕಳೆದ 15 ವರ್ಷಗಳಿಂದ ಪ್ರಭಾಸ್ ಗೊತ್ತು. 2009ರಲ್ಲಿ ಮೊದಲ ಬಾರಿಗೆ ಪ್ರಭಾಸ್ ಜೊತೆಗೆ ಬಿಲ್ಲಾ ಸಿನಿಮಾಗಾಗಿ ಕೆಲಸ ಮಾಡಿದೆ. ನಂತರ ಮಿರ್ಚಿ, ಬಾಹುಬಲಿ ಸಿನಿಮಾಗಳನ್ನು ಇಬ್ಬರು ಒಟ್ಟಾಗಿ ಮಾಡಿದ್ವಿ. ಈ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆದವು. ಈ ಹಂತದಲ್ಲಿ ನಮ್ಮ ನಡುವೆ ಒಳ್ಳೆಯ ಸ್ನೇಹ ಬಂಧ ಏರ್ಪಟ್ಟಿತು. ನನ್ನ 3aM ಫ್ರೆಂಡ್ಸ್ ಪೈಕಿ ಪ್ರಭಾಸ್ ಕೂಡ ಒಬ್ಬರು. ಅಂದರೆ, ಯಾವ ಸಮಯದಲ್ಲಿ ಬೇಕಿದ್ದರೂ ಫೋನ್‍ನಲ್ಲಿ ಮಾತನಾಡುವಷ್ಟು ಸಾಮೀಪ್ಯ ಇದೆ ಎಂದರ್ಥ. ನಮ್ಮಿಬ್ಬರಿಗೆ ಇನ್ನೂ ಮದುವೆ ಆಗದ ಕಾರಣ, ಬೆಳ್ಳಿ ತೆರೆ ಮೇಲೆ ನಮ್ಮಿಬ್ಬರ ಜೋಡಿ ಅದ್ಭುತವಾಗಿರುವ ಕಾರಣದಿಂದ ನಮ್ಮಿಬ್ಬರ ಮಧ್ಯೆ ಲವ್ ಇದೆ ಎಂಬ ವದಂತಿ ಹಬ್ಬಿಸಿದ್ದಾರೆ. ನಮ್ಮ ಮಧ್ಯೆ ಲವ್ ಇದ್ದಿದ್ದರೇ ಅದನ್ನು ಯಾವಾಗಲೋ ಬಹಿರಂಗಪಡಿಸುತ್ತಿದ್ದೆವು. ನಮ್ಮ ವ್ಯಕ್ತಿತ್ವಗಳು ಒಂದೇ.. ಭಾವನೆಗಳನ್ನು ಬಚ್ಚಿಟ್ಟುಕೊಳ್ಳಲ್ಲ.

ಇನ್ನೂ ಹೇಳುವುದು ಸಾಕಷ್ಟಿದೆ. ಇತ್ತೀಚಿಗೆ ಖ್ಯಾತ ನಿರ್ದೇಶಕರೊಬ್ಬರ ಪುತ್ರನ ಜೊತೆ ನನಗೆ ಮದುವೆ ಎಂಬ ವದಂತಿ ಹಬ್ಬಿದೆ. ಇದು ಸರಿಯಲ್ಲ. ಇದು ಶುದ್ಧ ಸುಳ್ಳು. ನನ್ನ ಮದುವೆ ಬಗ್ಗೆ ಎಲ್ಲರಿಗೂ ಏಕಿಷ್ಟು ಆಸಕ್ತಿಯೋ ಗೊತ್ತಾಗುತ್ತಿಲ್ಲ. ಇಂತಹ ವದಂತಿಗಳಿಂದ ನಮ್ಮ ಕುಟುಂಬ ಸದಸ್ಯರು ಅನುಭವಿಸುವ ನೋವು ನಮಗಷ್ಟೇ ಗೊತ್ತು.
– ಅನುಷ್ಕಾ ಶೆಟ್ಟಿ, ನಟಿ

LEAVE A REPLY

Please enter your comment!
Please enter your name here