ನನ್ನ ಮೇಲೆ ಅಷ್ಟೊಂದು ಗೌರವವಿದ್ದರೆ..! – ಪ್ರಧಾನಿ ನರೇಂದ್ರ ಮೋದಿ ಮಾಡಲು ಹೇಳಿದ ಆ ಕೆಲಸ ಏನು ಗೊತ್ತಾ..?

ನನ್ನ ಮೇಲೆ ಅಷ್ಟೊಂದು ಗೌರವವಿದ್ದರೆ..! ಹೌದು ಇದು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ವಂದೇ ಮಾತರಂ. ನಮ್ಮ ಪ್ರಧಾನಿ ನರೇಂದ್ರ ಮೋದಿ ನಮಗಾಗಿ ಮತ್ತು ನಮ್ಮ ದೇಶಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಈ ಭಾನುವಾರ ಅಂದರೆ ಏಪ್ರಿಲ್‌ ೧೨ರಂದು ನಾವೆಲ್ಲರೂ ಎಂದು ನಿಂತು ನಮ್ಮ ಪ್ರಧಾನಿ ಗೌರವ ಸಲ್ಲಿಸೋಣ. ಪ್ರತಿಯೊಬ್ಬರು ಸಂಜೆ ೫ ಗಂಟೆಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ನಮ್ಮ ಪ್ರಧಾನಿ ನರೇಂದ್ರ ಮೋದಿಗೆ 5 ನಿಮಿಷ ಗೌರವ ಸಲ್ಲಿಸೋಣ

ಎಂದು ವಾಟ್ಸಾಪ್‌, ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಹರಿಬಿಡಲಾಗಿತ್ತು.

ಈ ಸಂದೇಶದ ಬಗ್ಗೆ ಟ್ವೀಟಿಸಿರುವ ಮೋದಿ,

ಪ್ರಧಾನಿಗೆ 5ನಿಮಿಷ ಗೌರವ ಸಲ್ಲಿಸುವಂತೆ ಕೆಲವರು ಅಭಿಯಾನ ಕೈಗೊಂಡಿದ್ದಾರೆ ಎನ್ನುವುದರ ಬಗ್ಗೆ ನನ್ನ ಗಮನಕ್ಕೆ ತರಲಾಗಿದೆ. ಮೆಲ್ನೋಟಕ್ಕೆ ಪ್ರಧಾನಿಯನ್ನು ಎಳೆ ತಂದಿದ್ದು ಚೇಷ್ಟೆ ಮಾಡಿದ್ದಾರೆ.

ಇದು ಒಳ್ಳೆಯ ಉದ್ದೇಶಕ್ಕೇ ಇರಬಹುದು, ಹೀಗಾಗಿ ನನ್ನ ಮನವಿ ಏನೆಂದರೆ ನಿಮಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಮತ್ತು ನೀವು ಮೋದಿಯನ್ನು ಗೌರವಿಸಲು ಬಯಸುತ್ತೀರಿ ಎನ್ನುವುದಾದ್ರೆ ಕೊರೋನಾ ವೈರಸ್‌ ಮುಗಿಯುವವರೆಗೆ ಒಂದು ಬಡ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಿ. ನನಗೆ ಇದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ

ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here