ನಟ-ನಟಿಯರು ಕಿಸ್ ಕೊಡುವಂತಿಲ್ಲ.. ಇದು ಕರೋನಾ ಎಫೆಕ್ಟ್

ಪ್ರಾಣಾಂತಕವಾಗಿ ಮಾರ್ಪಟ್ಟ ಕರೋನಾ ವೈರಸ್ ಈಗಾಗಲೇ 900 ಮಂದಿಯನ್ನು ಬಲಿ ಪಡೆದಿದೆ. ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಈ ಮಹಾಮಾರಿ ಈಗ ಇಡೀ ಜಗತ್ತಿಗೆ ಹರಡುತ್ತಿದೆ. ಕರೋನಾ ವೈರಸ್ ಎಫೆಕ್ಟ್ ಸಿನಿಮಾ ಇಂಡಸ್ಟ್ರಿ ಮೇಲೆ ಆಗಿದೆ.

ಚೀನಾದಲ್ಲಿ ಈಗಾಗಲೇ ಸಿನಿಮಾ, ಸೀರಿಯಲ್ ಚಿತ್ರೀಕರಣಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲಾಗಿದೆ. ಈಗ ಮುಂಜಾಗ್ರತಾ ಕ್ರಮವಾಗಿ ತೈವಾನ್ ದೇಶ ಹೊಸದೊಂದು ಆದೇಶ ಹೊರಡಿಸಿದೆ.

ನಟನಟಿಯರು ಕರೋನಾ ವೈರಸ್‍ಗೆ ತುತ್ತಾಗದಿರಲು ಲಿಪ್‍ಲಾಕ್ ಸೀನ್ ಇಲ್ಲದೇ ಶೂಟಿಂಗ್ ನಡೆಸಬೇಕೆಂದು ತೈವಾನ್‍ನ ಟಿವಿ ಸ್ಟೇಷನ್‍ನ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜೊತೆಗೆ ಲಿಪ್‍ಲಾಕ್ ಸೀನ್‍ಗಳಿಂದ ಜನತೆ ಪ್ರಚೋದನೆಗೆ ಒಳಗಾಗುವ ಸಂಭವ ಇದೆ. ಹೀಗಾಗಿ ಲಿಪ್‍ಲಾಕ್ ದೃಶ್ಯಗಳಿರುವ ಯಾವುದೇ ಸೀರಿಯಲ್, ಸಿನಿಮಾ ಪ್ರಸಾರ ಮಾಡದಂತೆ ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ.

ಸಿಂಗಾಪುರ ಸರ್ಕಾರ ಕೂಡ ಇಂಥಾದ್ದೇ ಆದೇಶ ನೀಡಿದೆ.

LEAVE A REPLY

Please enter your comment!
Please enter your name here