ನಟಿ ರಿಯಾ ಚಕ್ರವರ್ತಿ ಅರೆಸ್ಟ್​

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಕೇಸ್​ನಲ್ಲಿ ಆರೋಪಿ ಆಗಿರುವ ನಟಿ ರಿಯಾ ಚಕ್ರವರ್ತಿಯನ್ನು ಮಾದಕ ದ್ರವ್ಯ ನಿಯಂತ್ರಣದ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಮೂರು ದಿನಗಳ ಸತತ ವಿಚಾರಣೆಯ ಬಳಿಕ ರಿಯಾರನ್ನು ಅರೆಸ್ಟ್ ಮಾಡಲಾಗಿದೆ.

ಎನ್​ಸಿಬಿ ಅಧಿಕಾರಿಗಳು ರಿಯಾ ಚಕ್ರವರ್ತಿಯ ವಾಟ್ಸಾಪ್​ ಚ್ಯಾಟ್​ನ್ನು ಸಂಗ್ರಹಿಸಿದ್ದರು. ಗೆಳೆಯ ಸುಶಾಂತ್​ ಸಿಂಗ್​​ ರಜಪೂತ್​ಗಾಗಿ ರಿಯಾ ಮಾದಕ ದ್ರವ್ಯಗಳನ್ನು ಖರೀದಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಆದರೆ ತಾನು ಮಾದಕ ದ್ರವ್ಯ ಸೇವಿಸಿರುವ ಆರೋಪವನ್ನು ರಿಯಾ ತಿರಸ್ಕರಿಸಿದ್ದಾಳೆ. ರಿಯಾ ಸಹೋದರ ಶೌವಿಕ್​ನನ್ನು ಎನ್​ಸಿಬಿ ಕೆಲ ದಿನಗಳ ಹಿಂದೆ ಬಂಧಿಸಿತ್ತು. ನಾನು ಏನೆಲ್ಲ ಮಾಡಿದ್ದಿನೋ ಅವೆಲ್ಲವೂ ಸುಶಾಂತ್​ಗಾಗಿಯೇ ಎಂದು ಎನ್​ಸಿಬಿ ಎದುರು ಭಾವನಾತ್ಮಕ ಹೇಳಿಕೆ ನೀಡಿದ್ದಳು ಎಂದು ವರದಿ ಆಗಿದೆ.

LEAVE A REPLY

Please enter your comment!
Please enter your name here