ನಟಿ ರಶ್ಮಿಕಾ ಮನೆ ಮೇಲೆ ಐಟಿ ರೇಡ್

ಸರಿಲೇರು ನೀಕೆವ್ವರು ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದ ಖ್ಯಾತ ನಟಿ ರಶ್ಮಿಕಾ ಮಂದಣ್ಣಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆಯ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೂರು ಕಾರುಗಳಲ್ಲಿ ಬಂದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಶ್ಮಿಕಾ ಮಂದಣ್ಣ ಅವರ ತಂದೆ-ತಾಯಿಯನ್ನು ತೆರಿಗೆ ಪಾವತಿ, ಆದಾಯ, ರಶ್ಮಿಕಾ ರೆಮ್ಯುನರೇಷನ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಐಟಿ ದಾಳಿ ವೇಳೆ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿಯೇ ಇದ್ದರೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದ ಮುದ್ದು ಮೊಗದ ಚೆಲುವೆ ಕನ್ನಡದ ಬಳಿಕ ಹೆಚ್ಚಾಗಿ ಮಿಂಚಿದ್ದು ಮಿಂಚುತ್ತಿರುವುದು ಟಾಲಿವುಡ್‍ನಲ್ಲಿ. ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಸರಿಲೇರು ನೀಕೆವ್ವರು.. ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿತಿನ್ ಹೀರೋ ಆಗಿ, ಅನಂತ್‍ನಾಗ್ ಪ್ರಧಾನ ಭೂಮಿಕೆಯಲ್ಲಿರುವ ಭೀಷ್ಮ ಸಿನಿಮಾದಲ್ಲಿ ಕೂಡ ರಶ್ಮಿಕಾ ಕಾಣಿಸಿಕೊಂಡಿದ್ದೂ, ಶೀಘ್ರ ರಿಲೀಸ್ ಆಗಲಿದೆ.

ಸದ್ಯ ರಶ್ಮಿಕಾ ರೆಮ್ಯುನರೇಷನ್ ಕೋಟಿ ದಾಟಿದೆ ಎನ್ನುತ್ತವೆ ಟಾಲಿವುಡ್ ಮೂಲಗಳು.

LEAVE A REPLY

Please enter your comment!
Please enter your name here