ಬಾಲಿವುಡ್‌ ನಟಿ  ಕರೀನಾ ಕಪೂರ್ ತನ್ನ ಕೂದಲನ್ನು ಹೇಗೆ ನಿರ್ವಹಿಸುತ್ತಾಳೆ ಎಂದು ಎಂದಾದರೂ ಯೋಚಿಸಿದ್ದೀರಾ? ಕೂದಲಿನ ವಿಷಯಕ್ಕೆ  ಬಂದಾಗ, ಯಾವಾಗಲೂ ಕೆಲಸ ಮಾಡುವುದು ನೈಸರ್ಗಿಕ ಉತ್ಪನ್ನಗಳು. ನಿಮ್ಮ ಕೂದಲನ್ನು ಬೆಳೆಸಲು ಅಥವಾ ಅದನ್ನು ಮೃದುವಾದ,ಹೊಳಪು ಕೂದಲನ್ನಾಗಿ ಮಾಡಲು ನೀವು ಬಯಸುತ್ತೀರಾ,  ಇಲ್ಲಿ ಹಲವಾರು ನೈಸರ್ಗಿಕ ಆಯ್ಕೆಗಳಿವೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಹಾಗೂ ನಿಮ್ಮ ಕೂದಲಿನ ಹೊಳಪನ್ನು ಉಳಿಸಿಕೊಳ್ಳಲು ಸಹಾಯ ಮಾಡಲು ಹೇರ್ ಆಯಿಲ್‌ಗಳು ಉತ್ತಮ. ನಿಮ್ಮ ಕೂದಲಿನ ಸಮಸ್ಯೆಗಳು ಏನೇ ಇರಲಿ, ನಾವು ನಿಮಗಾಗಿ ಕೆಲವು ಹೇರ್ ಆಯಿಲ್ ಬಳಕೆಗಳ ಮಾಹಿತಿಗಳನ್ನು ಒಮ್ಮೆ ನೋಡಿ:

ತೆಂಗಿನ ಎಣ್ಣೆ: ತೆಂಗಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ತೆಂಗಿನಲ್ಲಿರುವ ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಕೂದಲು ಹಾಗೂ ತಲೆಬುರುಡೆಗೆ ಹೆಚ್ಚಿನ ಪ್ರಯೋಜನವನ್ನು ಉಂಟು ಮಾಡುತ್ತದೆ.ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಈ ಎಣ್ಣೆಯನ್ನು ಬೆಚ್ಚಗಾಗಿಸಿ ಮತ್ತು ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ಈ ತೈಲವು ನೈಸರ್ಗಿಕ ಕಂಡಿಷನರ್ ಮತ್ತು ಹೊಳೆಯುವ ಕೂದಲಿಗೆ ಕಾರಣವಾಗುತ್ತದೆ.

 

ಬಾದಾಮಿ ಎಣ್ಣೆ : ಈ ಎಣ್ಣೆಯಲ್ಲಿ ವಿಟಮಿನ್ ಇ ಇದ್ದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ ಮತ್ತು ಉದ್ದವಾದ, ರೇಷ್ಮೆಯಂತಹ ನುಣುಪನ್ನು ನೀಡುತ್ತದೆ.

ಳ್ಳೆಣ್ಣೆ :  ಈ ತೈಲವು ಹೊಟ್ಟು ಮತ್ತು ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನೆತ್ತಿಯನ್ನು ಪೋಷಿಸುವುದರ ಜೊತೆಗೆ, ತಲೆಹೊಟ್ಟು ತೆಗೆದುಹಾಕಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.

ಹರಳೆಣ್ಣೆ : ಖನಿಜಗಳು, ಪ್ರೋಟೀನ್ಗಳು, ವಿಟಮಿನ್ ಇ ಮತ್ತು ಕೊಬ್ಬಿನ ಅಂಶಗಳಿಂದ ಸಮೃದ್ಧವಾಗಿವೆ, ಇದನ್ನು ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ, ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಶಾಂಪೂ ಬಳಸಿ ತೊಳೆಯಿರಿ. ನಿಯಮಿತವಾಗಿ ಬಳಸುವುದರಿಂದ ಇದು ಕೂದಲಿನ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ತೇವಾಂಶವನ್ನು ಮೃದುಗೊಳಿಸುತ್ತದೆ.

LEAVE A REPLY

Please enter your comment!
Please enter your name here