ನಂಬರ್ 1 ದೇಶಪ್ರೇಮಿ ಯಾರು..? ರಾಜ್ಯ ರಾಜಕೀಯದಲ್ಲಿ ವಾರ್..

ನಂಬರ್ 1 ದೇಶಪ್ರೇಮಿ ಯಾರು..? ಈ ಪ್ರಶ್ನೆ ಮುಂದಿಟ್ಟುಕೊಂಡು ರಾಜ್ಯ ರಾಜಕೀಯದಲ್ಲಿ ಮಾತಿನ ವಾರ್ ನಡೆಯುತ್ತಿದೆ.

ನೆರೆ ಬಂದಾಗ ಪರಿಹಾರ ಕಾರ್ಯದಲ್ಲಿ ತೊಡಗುವುದು, ಕೆರೆ ಕಲ್ಯಾಣಿ ಸ್ವಚ್ಛಗೊಳಿಸುವುದು, ಕುಗ್ರಾಮದಲ್ಲಿ ಕನಿಷ್ಠ ಸೌಕರ್ಯ ಒದಗಿಸುವುದನ್ನು ದೇಶಪ್ರೇಮ ಎನ್ನುವುದಾದರೆ ಚಕ್ರವರ್ತಿ ಸೂಲಿಬೆಲೆ ನಂಬರ್ 1 ದೇಶಭಕ್ತ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಉದ್ದೇಶಿಸಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ತಾಣದಲ್ಲಿಯೇ ಸಚಿವ ಸುರೇಶ್ ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರಿಗಳಲ್ಲಿಯೂ ಧರ್ಮ ಹುಡುಕಿದವ, ಮತ ಕೇಳಲು ವೀರ ಯೋಧ ಅಭಿನಂದನ್ ಫೋಟೋ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಡಿವಿ ಸದಾನಂದಗೌಡರಿಂದಲೇ ದೇಶದ್ರೋಹಿ ಅನ್ನಿಸಿಕೊಂಡ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿ ಆಗುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶ ಪ್ರೇಮಕ್ಕೆ ರ್ಯಾಂಕ್ ಕೊಡುತ್ತಾರೆ ಸಚಿವ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ ರ್ಯಾಂಕ್ ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ ಮೇಲಿನ ನನ್ನ ಅಭಿಮಾನಕ್ಕೆ ಕುಂದುಂಟಾಗಿದೆ. ದೇಶ ಪ್ರೇಮದ ವಿಚಾರದಲ್ಲಿ ರ್ಯಾಂಕ್ ಕೊಟ್ಟರೆ ಆತ ಕೊನೆ ರ್ಯಾಂಕ್ ಎನ್ನುತ್ತಾ ಸಚಿವ ಸುರೇಶ್ ಕುಮಾರ್ ಅವರಿಗೂ, ಚಕ್ರವರ್ತಿ ಸೂಲಿಬೆಲೆ ಅವರಿಗೂ ಟ್ವೀಟೇಟು ಕೊಟ್ಟಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

LEAVE A REPLY

Please enter your comment!
Please enter your name here