ನಂದಿನಿ ಬೆಲೆ ಏರಿಕೆ – ರೈತರಿಗೆಷ್ಟು ಸಿಹಿ..? ಗ್ರಾಹಕರಿಗೆಷ್ಟು ಹೊರೆ..?

ಫೆಬ್ರವರಿ ಒಂದರಿಂದ ಜಾರಿಗೆ ಬರುವಂತೆ ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲು ಉತ್ಪನ್ನಗಳ ಬೆಲೆ ಏರಿಕೆ ಮಾಡಿದೆ. ಲೀಟರ್‌ ಹಾಲಿನ ಬೆಲೆ ಎರಡು ರೂಪಾಯಿ ಮತ್ತು ಲೀಟರ್‌ ಮೊಸರಿನ ಬೆಲೆ ಎರಡು ರೂಪಾಯಿ ಹೆಚ್ಚಳವಾಗಿದೆ.

ಎರಡು ರೂಪಾಯಿ ಏರಿಕೆಯಲ್ಲಿ ಒಂದು ರೂಪಾಯಿಯನ್ನು ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಉಳಿದ ಒಂದು ರೂಪಾಯಿಯನ್ನು ಜಿಲ್ಲೆಯ ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ. ಈ ಒಂದು ರೂಪಾಯಿಯಲ್ಲಿ ಹಸುಗಳ ವಿಮೆಗಾಗಿ ನಲವತ್ತು ಪೈಸೆ, ಹಾಲು ಮಾರಾಟಗಾರರ ಕಮಿಷನ್‌ಗಾಗಿ ನಲವತ್ತು ಪೈಸೆ ಮತ್ತು ಒಕ್ಕೂಟಗಳ ಕಾರ್ಯದರ್ಶಿಗಳಿಗೆ ಇಪ್ಪತ್ತು ಪೈಸೆ ಕಮಿಷನ್‌ ನೀಡಲು ತೀಮಾರ್ನಿಸಲಾಗಿದೆ.

ರಾಜ್ಯದಲ್ಲಿ ಕೆಎಂಎಫ್‌ ಜೊತೆ ಗುರುತಿಸಿಕೊಂಡಿರುವ ಇಪ್ಪತ್ತೈದು ಲಕ್ಷದಷ್ಟು ಹಾಲು ಉತ್ಪಾದಕರಿದ್ದರು, ಪ್ರತಿದಿನ ಎಂಭತ್ತನಾಲ್ಕು ಲಕ್ಷ ಕೆಜಿಯಷ್ಟು ಹಾಲನ್ನು ಖರೀದಿ ಮಾಡಲಾಗುತ್ತದೆ. ದಿನಕ್ಕೆ ಕೆಎಂಎಫ್‌ ರೈತರಿಗೆ ಹದಿನೇಳು ಕೋಟಿ ರೂಪಾಯಿಯನ್ನು ಸಂದಾಯ ಮಾಡುತ್ತಿದೆ. ೨೦೧೮ರ ಅವಧಿಯಲ್ಲಿ ಕೆಎಂಎಫ್‌ ಹದಿನಾಲ್ಕು ಸಾವಿರದ ನಾಲ್ಕುನೂರ ಆರುವತ್ತಾರು ಕೋಟಿ ರೂಪಾಯಿಯಷ್ಟು ವ್ಯವಹಾರ ಮಾಡಿದೆ.

LEAVE A REPLY

Please enter your comment!
Please enter your name here