ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಪರಿಸರದೊಂದಿಗೆ ಬದುಕಿದರೆ ಮಾತ್ರ ಪರಿಸರದ ಅರಿವಾಗೋದು.ಅದರಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಬಹುದು.ಆಧುನಿಕ ಗಡಿಬಿಡಿಯ ಜಗತ್ತು ಅದನ್ನು ಮರೆತು ಹೋಗಿದೆ.ಅದರೊಂದಿಗೆ ಬದುಕಲು ಕಲಿತರೆ ನಾವೂ ಅದರಿಂದ ಹೊರಬರಲು ಇಷ್ಟ ಪಡಲಾರೆವು ಎಂದು ಪರಿಸರ ದಿನಾಚರಣೆ ಪ್ರಯುಕ್ತ ಶ್ರೀ ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ನಡೆದ ಗಿಡವನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರಿಮತಿ ಪರಿಮಳ.ಎಮ್.ವಿ ನುಡಿದರು.

ಪ್ರತೀವರ್ಷ ಮಕ್ಕಳ ಜೊತೆ ಪರಿಸರಕ್ಕಾಗಿ ಅದರ ಉಳಿವಿಗಾಗು ಒಂದಿಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು.ಆದರೆ ಇಂದು ಮಹಾಮಾರಿ ಕೊರೊನ ಎಲ್ಲರನ್ನು ಬಂಧಿಯಾಗಿಸಿದೆ.ಹೀಗಾಗಿ ಶಿಕ್ಷಕರಾದ ನಾವೆಲ್ಲರೂ ಈ ಸಲ ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ವರ್ಷ ಪೂರ್ತಿ ಅದರ ಜವಾಬ್ದಾರಿ ತೆಗೆದುಕೊಂಡು ಅದರ ಆರೈಕೆ ನಮ್ಮದಾಗಿಸಿ ಆ ಮೂಲಕ ಪರಿಸರಕ್ಕೆ ಕಿಂಚಿತ್ತು ಸೇವೆ ಸಲ್ಲಿಸೋಣ ಎಂದು ಹೇಳಿದರು.

ನಂತರ ಪ್ರತಿಯೊಬ್ಬ ಶಿಕ್ಷಕರು ಒಂದೊಂದು ಗಿಡವನ್ನು ದತ್ತು ಕೊಂಡು ಅದನ್ನು ಉಳಿಸಿ ಬೆಳೆಸುವ ವಾಗ್ದಾನ ಮಾಡಿದರು.ಆಗಮಿಸಿದ ಪ್ರತೀಯೊಬ್ಬರು ಸ್ಯಾನಿಟೈಸರ್ ಬಳಸಿ ವೈಯಕ್ತಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಸೂಸೂತ್ರವಾಗಿ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here