ಧನ್ಯವಾದ ಬಿಸಿಸಿಐ….ನಮ್ಮವರು ಸೇಫ್​ ಆಗಿ ಮನೆ ತಲುಪಿದ್ದಾರೆ.

ಭಾರತದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗುತ್ತಲೇ ಐಪಿಎಲ್ ಆಟಗಾರರಿಗೂ ಸೋಂಕು ತಗುಲಿತ್ತು. ಆಟಗಾರರಿಗಾಗಿ ಮಿರ್ಮಾಣ ಮಾಡಲಾಗಿದ್ದ ಬಯೋ ಬೈಬಲ್ ವ್ಯವಸ್ಥೆಯನ್ನು ಆಟಗಾರರಿಗೆ ಕೊರೋನಾ ಸೋಂಕು ತಗುಲಿತ್ತು. ಅದರಿಂದಾಗಿ ಐಪಿಎಲ್ ಸೀಸನ್ 14 ಅನ್ನು ಅರ್ಧಕ್ಕೆ ನಿಲ್ಲಿಸಿ ಮುಂದೂಡಲಾಗಿದೆ.

ಐಪಿಎಲ್​ ರದ್ದಾದ ಹಿನ್ನೆಲೆಯಲ್ಲಿ ಆಯಾ ರಾಷ್ಟ್ರದ ಆಟಗಾರರು ಮರಳಿ ತಮ್ಮ ದೇಶಕ್ಕೆ ಹೋಗುತ್ತಿದ್ದಾರೆ. ಇಂದು ವೆಸ್ಟ್ ಇಂಡೀಸ್ ಕ್ರಿಕೇಟ್ ಟೀಂ ತಮ್ಮ ಆಟಗಾರರು ಮರಳಿ ಬಂದಿರುವುದಕ್ಕೆ ಬಿಸಿಸಿಐ ಗೆ ಧನ್ಯವಾದ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೇಟ್ ಟೀಂ, ನಮ್ಮ ಆಟಗಾರರು ಮರಳಿ ಸೇಫಾಗಿ ತಲುಪಿದ್ದಾರೆ. ಬಿಸಿಸಿಐಗೆ ಧನ್ಯವಾದ ಎಂದು ಹೇಳಿದೆ. ಈ ಬಾರಿಯ ಐಪಿಎಲ್​ ನಲ್ಲಿ ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕ ಕಿರನ್ ಪೊಲಾರ್ಡ್, ಸುನಿಲ್ ನರೈನ್, ಡ್ವೇನ್ ಬ್ರಾವೋ, ಆ್ಯಂಡ್ರೆ ರಸಲ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೇಯರ್, ಕ್ರಿಸ್ ಗೇಲ್ ಮತ್ತು ಫ್ಯಾಬಿಯ್ ಅಲೆನ್ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here