ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!

Illegal Exam

ಸಾಂದರ್ಭಿಕ ಚಿತ್ರ

ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಜೂನ್‌ ನಲ್ಲಿ ನಡೆಯಲಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ವಿವಿಧ ಕಡೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಯಾವ ಜಿಲ್ಲೆಯಲ್ಲಿದ್ದಾರೋ ಅದೇ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ.

ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗುವ ಮುಂಚೆ ದ್ವಿತೀಯ ಪಿಯುಸಿ ಯ ಎಲ್ಲಾ ಪರೀಕ್ಷೆಗಳು ಮುಗಿದಿದ್ದವು. ಆದರೆ, ಇಂಗ್ಲಿಷ್ ಭಾಷೆ ಪತ್ರಿಕೆ ಮಾತ್ರ ಉಳಿದಿತ್ತು.

ಈ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಿಸಿದ ಪರಿಣಾಮ ಈ ಒಂದು ಪತ್ರಿಕೆಯ ಪರೀಕ್ಷೆಯನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಾಧ್ಯವಾಗಿರಲಿಲ್ಲ.

ಹೀಗಾಗಿ ಮಾರ್ಚ್​​ 23ನೇ ತಾರೀಕಿನಂದೇ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ‌ಆದೇಶ ಹೊರಡಿಸಿದ್ದರು. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೂ ಮುಂದೂಡಲಾಗಿತ್ತು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಬೋರ್ಡ್ ಗೆ ನೀಡಿ, ಸೂಚನೆ ಅಗತ್ಯ ಕ್ರಮವಹಿಸುವಂತೆ ಪಿಯುಸಿ ಬೋರ್ಡ್ ನಿರ್ದೇಶಕರು ಎಲ್ಲಾ ಜಿಲ್ಲಾ ಡಿಡಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಇಚ್ಛೆ ಪಟ್ಟಲ್ಲಿ ಅವರು ಪ್ರಸಕ್ತ ಇರುವ ಜಿಲ್ಲೆಯ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು ಎಂದು ಪಿಯುಸಿ ಬೋರ್ಡ್ ಸೂಚನೆ ನೀಡಿದೆ.

ಕಳುಹಿಸುವ ವಿಧಾನ:

ಇ- ಮೇಲ್ ಮೂಲಕ ಮಾಹಿತಿಯನ್ನ ಕಳಿಸಬೇಕು.

ವಾಟ್ಸ್ ಅಪ್ ನಲ್ಲಿ ಮಾಹಿತಿ ಕಳಿಸೋ ಹಾಗೆ ಇಲ್ಲ.

ddtt.pue@gmail.com ಮೂಲಕ ಮಾಹಿತಿ ಕಳಿಸಬೇಕು.

ಈ ಮಾಹಿತಿಗಳನ್ನ ಡಿಡಿಗಳು ಸಂಗ್ರಹ ಮಾಡಿ ಕಳಿಸಬೇಕು

1. ಕಾಲೇಜಿನ ಸಂಕೇತ ಸಂಖ್ಯೆ.
2. ವಿದ್ಯಾರ್ಥಿಯ ಹೆಸರು.
3. ಸ್ಟೂಡೆಂಟ್ ನಂಬರ್.
4.ದ್ವೀತಿಯ ಪಿಯುಸಿ ರಿಜಿಸ್ಟರ್ ನಂಬರ್.
5.ವಿದ್ಯಾರ್ಥಿಗಳ ಮೊಬೈಲ್ ನಂಬರ್.
6.ಪ್ರಸ್ತುತ ವಾಸವಿರುವ ಜಿಲ್ಲೆಯ ಹೆಸರು.
7.ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತ.
8.ಪ್ರಸ್ತುತ ವಾಸವಿರುವ ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದರೆ ವಿವರ ನೀಡುವುದು.

LEAVE A REPLY

Please enter your comment!
Please enter your name here