ದೊಂಬಿ ಎಬ್ಬಿಸಿ ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸಂಚು..! – ಸಂಪೂರ್ಣ ವಿವರ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆ ಸಂಚು ನಡೆಸಲಾಗಿತ್ತು ಎಂಬ ಆರೋಪದಡಿ ಬೆಂಗಳೂರು ಪೊಲೀಸರು ಮುಸ್ಲಿಂ ಸಂಘಟನೆ ಎಸ್‌ಡಿಪಿಐಗೆ ಸೇರಿದ್ದಾರೆ ಎನ್ನಲಾಗಿರುವ ಐವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಆರ್‌ ಟಿ ನಗರದ ನಿವಾಸಿಗಳಾದ ಮೊಹಮ್ಮದ್‌ ಇರ್ಫಾನ್‌ (33), ಸೈಯದ್‌ ಅಕ್ಚರ್‌ (46), ಲಿಂಗರಾಜಪುರದ ಸೈಯದ್‌ ಸಿದ್ದಿಕ್‌ (33), ಗೋವಿಂದಪುರದ ಅಕ್ಚರ್‌ ಪಾಷಾ (27, ಸನಾವುಲ್ಲ ಷರೀಫ್‌ (28), ಶಿವಾಜಿನಗರದ ಸಾದಿಕ್‌ ಉಲ್‌ ಅಮೀನ್‌ (39) ಬಂಧಿತರು. ಎಸ್‌ಡಿಪಿಐಯಿಂದಲೇ ಇವರಿಗೆ ಪ್ರತಿ ತಿಂಗಳು ೧೦ ಸಾವಿರ ರೂಪಾಯಿ ಸಂದಾಯ ಆಗುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹತ್ಯೆಗೆ ಹೇಗೆ ನಡೆದಿತ್ತು ಸಂಚು..?

ಡಿಸೆಂಬರ್‌ 22ರ ಭಾನುವಾರದಂದು ಬೆಂಗಳೂರಿನ ಟೌನ್‌ಹಾಲ್‌ ಎದುರು ಪೌರತ್ವ ಕಾಯ್ದೆ ಬೆಂಬಲಿಸಿ ಬೃಹತ್‌ ಜನಸಭೆ ನಡೆದಿತ್ತು. ಈ ಬಹಿರಂಗ ಸಭೆಯ ಬಳಿಕ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ವರುಣ್‌ ಎಂಬವರನ್ನು ಹಿಂಬಾಲಿಸಿ ಲಾಂಗ್‌ನಿಂದ ಹಲ್ಲೆ ನಡೆಸಿ ರಾಡ್‌ನಿಂದ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಆದರೆ ವರುಣ್‌ಗೂ ಬಂಧಿತರಿಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಪೌರತ್ವ ಕಾಯ್ದೆ ಪರ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಹತ್ಯೆಗೆ ಯತ್ನಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಾವೇಶದ ನಡೆದ ದಿನ ಕಲ್ಲು ತೂರಿ ಗುಂಪನ್ನು ಚದುರಿಸುವುದು ಈ ಗ್ಯಾಂಗ್‌ನ ಹುನ್ನಾರವಾಗಿತ್ತು. ಅದಕ್ಕಾಗಿಯೇ ಏಳೆಂಟು ಕಲ್ಲುಗಳನ್ನೂ ಎಸೆದಿದ್ದರು. ಕಲ್ಲು ತೂರಾಟ ವೇಳೆ ಒಬ್ಬಂಟಿ ಆಗುವ ಹಿಂದೂ ಸಂಘಟನೆಯ ಮುಖಂಡರನ್ನ ಕೊಲೆ ಮಾಡುವುಕ್ಕೆ ಸಂಚು ಹೆಣೆದಿದ್ದರು. ಆದರೆ ಆರೋಪಿಗಳು ಎಸೆದಿದ್ದ ಕಲ್ಲುಗಳು ಬೇರೆಡೆ ಬಿದ್ದಿದ್ರಿಂದ ಸಂಚು ಕೈಕೊಟಿತ್ತು. ಬಳಿಕ ಬೌನ್ಸ್‌ ಗಾಡಿಯಲ್ಲಿ ಹೋಗುತ್ತಿದ್ದ ವರುಣ್‌ನನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದರು.

ಸಿಸಿಟಿವಿ ದೃಶ್ಯದ ಸಾಕ್ಷ್ಯ:

ವರುಣ್‌ ಕೊಲೆ ಯತ್ನದ ಸಿಸಿಟಿವಿ ದೃಶ್ಯ ಪೊಲೀಸರ ತನಿಖೆಗೆ ಹೊಸ ಆಯಾಮವನ್ನೇ ಕೊಟ್ಟಿತು. ಆ ಸಿಸಿಟಿವಿ ದೃಶ್ಯ ಸಿಕ್ಕಿದ್ದು ಕಲಾಸಿಪಾಳ್ಯದಲ್ಲಿ. ಈ ಸಿಸಿಟಿವಿ ದೃಶ್ಯದಲ್ಲಿ ಎರಡು ಬೈಕ್‌ಗಳಲ್ಲಿ ದುಷ್ಕರ್ಮಿಗಳು ಹೋಗುತ್ತಿರುವ ದೃಶ್ಯ ಸೆರೆ ಆಗಿದೆ.

ಹೇಗೆ ಸಂಚು ಮಾಡಿದ್ದರು..?

ಟೌನ್‌ಹಾಲ್‌ನಲ್ಲಿ ಕಲ್ಲು ತೂರಾಟ ನಡೆಸಿ ದೊಂಬಿ ಎಬ್ಬಿಸಿ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಯತ್ನಿಸುವುದಕ್ಕೂ ಮೊದಲು ನಾಲ್ಕು ಮಂದಿಯೂ ರಿಚರ್ಡ್ಸ್‌ ಪಾರ್ಕ್‌ ಬಳಿ ಸಭೆ ಸೇರುತ್ತಾರೆ. ಅಲ್ಲಿಂದ ಟೌನ್‌ಹಾಲ್‌ಗೆ ಬಂದು ಏಳು ಕಲ್ಲುಗಳನ್ನು ಎಸೆಯುತ್ತಾರೆ. ಆದರೆ ದೊಂಬಿ ಎಬ್ಬಿಸುವ ಸಂಚು ವಿಫಲವಾದ ಬಳಿಕ ಟೌನ್‌ಹಾಲ್‌ನಿಂದ ಸಭೆ ಮುಗಿಸಿ ಹೊರಟ್ಟಿದ್ದ ವರುಣ್‌ನನ್ನು ಹಿಂಬಾಲಿಸಿ ಕುಂಬಾರಗುಡಿ ರಸ್ತೆಯಲ್ಲಿ ಮಚ್ಚು ಬೀಸುತ್ತಾರೆ. ಕತ್ತನ್ನೇ ಕತ್ತರಿಸುವ ಸಂಚನ್ನು ಹೆಣೆದಿದ್ದರು. ಆದರೆ ವರುಣ್‌ ಕೈ ಅಡ್ಡ ಇಟ್ಟಿದ್ದರಿಂದ ಆಗಲಿಲ್ಲ.

ಅಲ್ಲಿಂದ ಮೈಸೂರು ರೋಡ್‌ ಮೂಲಕ ಆರ್‌ಆರ್‌ ನಗರದ ಆರ್ಚ್‌ ಬಳಿ ತೆರಳಿ ಅಲ್ಲಿ ರಕ್ತ ಚಿಮ್ಮಿದ್ದ ಬಟ್ಟೆಗಳನ್ನು ಬದಲಾಯಿಸ್ತಾರೆ. ಇವರು ಒಂದೇ ಬಾರಿಗೆ ಮೂರು ಜೊತೆ ಬಟ್ಟೆಗಳನ್ನು ಧರಿಸಿದ್ದರು. ಬಿಡದಿಯ ತಿರುಮಲ ಗ್ರೀನ್‌ ಪ್ಯಾಲೇಸ್‌ ಬಳಿ ಎರಡನೇ ಜೊತೆ ಬಟ್ಟೆಯನ್ನೂ ಕಳಚುತ್ತಾರೆ. ಆಮೇಲೆ ಬಿಡದಿ ಬಳಿ ಕಳಚಿದ ಎಲ್ಲ ಬಟ್ಟೆಗಳನ್ನು ಪೆಟ್ರೋಲ್‌ ಹಾಕಿ ಸುಡುತ್ತಾರೆ.

ಮತ್ತೆ ಬಿಡದಿಯ ಬಳಿ ಯೂ ಟರ್ನ್‌ ಪಡೆದು ಮೈಸೂರು ರಸ್ತೆಯಲ್ಲಿರುವ ಮಸೀದಿಗೆ ಹೋಗಿ ಅಲ್ಲಿಂದ ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಗಾಡಿಗೆ ಪೆಟ್ರೋಲ್‌ ಹಾಕಿಸುತ್ತಾರೆ. ತರುವಾಯ ನೈಸ್‌ರೋಡ್‌ ಮೂಲಕ ಅಂಚೆಪಾಳ್ಯ ಕೆರೆ ಬಳಿ ಹೋಗಿ ಕೃತ್ಯಕ್ಕೆ ಬಳಸಿದ್ದ ಲಾಂಚ್‌, ಮಚ್ಚುಗಳನ್ನು ಎಸೆಯುತ್ತಾರೆ. ಅಲ್ಲಿಂದ ಕೆ ಆರ್‌ ಪುರಂನ ಐಟಿಐ ಕಾಲೋನಿಯ ಮೋರಿಯಲ್ಲಿ ಹೆಲ್ಮೆಟ್‌ ಮತ್ತು ಶೂಗಳನ್ನು ಬಿಸಾಕಿ, ಹೆಗಡೆ ನಗರದಲ್ಲಿ ಒಂದು ಬೈಕ್‌ನ್ನೂ ಮತ್ತು ಕೊತ್ತನೂರು ಸ್ಟೇಷನ್‌ ಬಳಿ ಎರಡನೇ ಬೈಕ್‌ನ್ನು ಮುಚ್ಟಿಡ್ತಾರೆ. ಮೂಲಗಳ ಪ್ರಕಾರ ಈ ಕೃತ್ಯಕ್ಕೆ ಬಳಸಿದ್ದ ಬೈಕ್‌ಗೆ ಆರೋಪಿಗಳು ಮಸಿ ಬಳಿದುಕೊಂಡು ಬಂದಿದ್ದರು.

ಚಕ್ರವತಿ ಸೂಲಿಬೆಲೆಗೆ ಪೊಲೀಸ್‌ ಭದ್ರತೆ:

ಎಸ್‌ಡಿಪಿಐ ಕಾರ್ಯಕರ್ತರಿಂದ ಕೊಲೆ ಯತ್ನ ನಡೆದಿದ್ದ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಪೊಲೀಸ್‌ ಇಲಾಖೆಗೆ ಗನ್‌ಮ್ಯಾನ್‌ ಭದ್ರತೆ ನೀಡಿದೆ. ಅಲ್ಲದೇ ಬೆಂಗಳೂರಿನ ಬನಶಂಕರಿಯಲ್ಲಿರುವ ಸೂಲಿಬೆಲೆ ನಿವಾಸದ ಬಳಿ ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದೆ.

ಬೆಂಗಳೂರು ಪೊಲೀಸ್‌ ಆಯುಕ್ತ ಸುಳ್ಳುಗಾರ:

ಇತ್ತ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್‌ ತುಂಬೆ

ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಒಬ್ಬ ಸುಳ್ಳುಗಾರ. ನಮಗೆ ಈ ಆರೋಪಿಗಳು ಯಾರು ಎನ್ನುವುದೇ ಗೊತ್ತಿಲ್ಲ ಎಂದಿದ್ದಾರೆ. ಹತ್ತು ಸಾವಿರ ರೂಪಾಯಿ ಇನಾಮು ಪಡೆಯುತ್ತಿದ್ದರು ಎಂಬ ಬಗ್ಗೆ ಸಾಕ್ಷ್ಯಗಳನ್ನು ಕೊಡಲಿ. ಭಾಸ್ಕರ್‌ ರಾವ್‌ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ವಿರುದ್ಧ ಕ್ರಮಕೈಗೊಂಡ್ರಾ..? ನಮ್ಮನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ ಬಿಜೆಪಿ ಈ ಆರೋಪ ಮಾಡುತ್ತಿದೆ

ಎಂದಿದ್ದಾರೆ.

ತೇಜಸಿಸೂರ್ಯ, ಸೂಲಿಬೆಲೆ ಮಹಾನ್‌ ದೇಶಭಕ್ತರೇನೂ ಅಲ್ಲ: ಕುಮಾರಸ್ವಾಮಿ

ಕಿಡಿಕೇಡಿಗಳ ಕೃತ್ಯಕ್ಕೆ ಯಾವುದೋ ಒಂದು ಧರ್ಮದ ಹೆಸರನ್ನು ಸೇರಿಸಬೇಡಿ. ಒಂದು ಸಮುದಾಯವನ್ನು ದೂರಬೇಡಿ. ಸತ್ಯಾಸತ್ಯತೆ ತಿಳಿದು ಕ್ರಮಕೈಗೊಳ್ಳಲಿ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಮಹಾನ್‌ ದೇಶಭಕ್ತರೇನೂ ಅಲ್ಲ. ಯುಗಪುರುಷರೂ ಅಲ್ಲ, ಅವರನ್ನು ಹುತಾತ್ಮರನ್ನಾಗಿ ಮಾಡಲು ಹೊರಟ್ಟಿದ್ದೀರಾ..? ಬೆಂಗಳೂರಿಗೆ ಸಂಸದ ತೇಜಸ್ವಿ ಸೂರ್ಯ ಕೊಡುಗೆ ಏನು..? ಏನ್‌ ಸಾಧನೆ ಮಾಡಿದ್ದಾರೆ ಅಂತ ಅವರನ್ನು ಕೊಲ್ಲುವುದಕ್ಕೆ ಹೋಗ್ತಾರೆ

ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

 

ಅವರದ್ದೇ ಸರ್ಕಾರ ಇದೆ, ನಿಷೇಧಿಸಲಿ – ಸಿದ್ದರಾಮಯ್ಯ:

ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಬಿಜೆಪಿ ನಾಯಕರ ಒತ್ತಾಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲೇಬೇಕು. ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಬಿಜೆಪಿ ಸರ್ಕಾರವೇ ಇದ್ಯಲ್ಲ, ಅವರೇ ಬ್ಯಾನ್‌ ಮಾಡಲಿ ಬಿಡಿ

ಎಂದು ಬೆಂಗಳೂರಲ್ಲಿ ಹೇಳಿದ್ದಾರೆ.

ಎಸ್‌ಡಿಪಿಐ ನಿಷೇಧಕ್ಕೆ ಕ್ರಮ:

ಎಸ್‌ಡಿಪಿಐ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ಎಸ್‌ಡಿಪಿಐ ಮತ್ತು ಪಿಎಫ್‌ಐ ನಂಟಿನ ಬಗ್ಗೆ, ಈ ಹಿಂದಿನ ದುಷ್ಕೃತ್ಯಗಳ ಬಗ್ಗೆ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಆರ್‌ಎಸ್‌ಎಸ್‌ ಕಾರ್ಯಕರ್ತ ವರುಣ್‌ ಕೊಲೆ ಯತ್ನ ಕೇಸಲ್ಲಿ ಸಂಸದರ ಕೊಲೆಗೂ ಯತ್ನ ನಡೆದಿರುವ ಅಂಶ ಬಯಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಮೈಸೂರಲ್ಲಿ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಕೊಲೆಗೆ ಯತ್ನ, ತಮಿಳುನಾಡಲ್ಲಿ ನಾಲ್ವರು ಉಗ್ರರ ಸೆರೆಯಲ್ಲೂ ಎಸ್‌ಡಿಪಿಐ ನಂಟಿರುವುದು ಗೊತ್ತಾಗಿದೆ

ಎಂದು ಹೇಳಿದ್ದಾರೆ.

ಎಸ್‌ಡಿಪಿಐ ನಿಷೇಧಿಸುವಂತೆ ಸಚಿವ ಸಿ ಟಿ ರವಿ ಆಗ್ರಹ:

LEAVE A REPLY

Please enter your comment!
Please enter your name here