ದೇಶಾದ್ಯಂತ NRC ಜಾರಿಯ ಅಗತ್ಯವೇನಿದೆ..? – ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ

ದೇಶಕ್ಕೆಲ್ಲ ಎನ್ಆರ್ಸಿ ಅಗತ್ಯವೇನಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು ದೇಶಾದ್ಯಂತ ಎನ್ಆರ್ಸಿ ಪ್ರಶ್ನೆ ಹೇಗೆ ಉದ್ಭವ ಆಗುತ್ತೆ..? ಅಸ್ಸಾಂನಲ್ಲಿ ನಡೆದಿದ್ದ ಹಿಂಸಾಚಾರದ ಬಳಿಕ ರಾಜೀವಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಮಾಡಿಕೊಂಡ ಒಪ್ಪಂದದ ಪ್ರಕಾರ ಅಸ್ಸಾಂನಲ್ಲಿ ಎನ್ಆರ್ಸಿ ಜಾರಿಯಾಗುತ್ತಿದೆ.

ದೇಶಾದ್ಯಂತ ಎಂಆರ್ಸಿ ಜಾರಿ ಅಗತ್ಯಾನೇ ಇಲ್ಲ ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಮೋದಿಯವರು ಕೂಡ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬಿಹಾರ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ.

ಬಿಹಾರದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಜಾರಿಗೆ ನಮ್ಮ ಸರ್ಕಾರ ಒಪ್ಪಿಕೊಂಡಿದೆ. ಹತ್ತು ವರ್ಷಗಳ ಹಿಂದೆ ಯುಪಿಎ ಅವಧಿಯಲ್ಲಿ ಎನ್ ಪಿ ಆರ್ ಜಾರಿಯಾಗಿತ್ತು. ಅವರಪ್ಪ ಕಾಯ್ದೆಗೂ NPR ಗೂ ಸಂಬಂಧ ಇದೆಯೇ ಎಂಬ ಬಗ್ಗೆ ಚರ್ಚೆಗೆ ಸಿದ್ಧ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here