ದೇಶಭಕ್ತ ಮಹೇಶ್‌ ವಿಕ್ರಮ್‌ ಹೆಗ್ಡೆಗೆ ವಂದೇ ಮಾತರಂ ಬರೋದೇ ಇಲ್ವಾ..?

ಪೋಸ್ಟ್‌ಕಾರ್ಡ್‌ ವೆಬ್‌ಸೈಟ್‌ನ ಸಂಪಾದಕ ಮತ್ತು ಬಲಪಂಥೀಯ ಮಹೇಶ್‌ ವಿಕ್ರಮ್‌ ಹೆಗ್ಡೆಗೆ ದೇಶಭಕ್ತಿ ಗೀತೆ ವಂದೇ ಮಾತರಂ ಬರಲ್ವಾ..? ಹೌದು ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಈ ವೀಡಿಯೋ ನೋಡಿದ ಮೇಲೆ. ವಂದೇ ಮಾತರಂ ಬರದವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ವಾದಿಸಿದವರಲ್ಲಿ ವಿಕ್ರಮ್‌ ಹೆಗ್ಡೆ ಕೂಡಾ ಒಬ್ಬರು.

ಮಂಗಳೂರು ಏರ್‌ಪೋರ್ಟ್‌ನಲ್ಲಿದ್ದ ಮಹೇಶ್‌ ವಿಕ್ರಮ್‌ ಹೆಗ್ಡೆಯನ್ನು ಸುತ್ತವರೆದ ಎಡಪಂಥೀಯ ಹೋರಾಟಗಾರರಾದ ಕವಿತಾ ರೆಡ್ಡಿ, ಅಮೂಲ್ಯ ಲಿಯೋನಾ ಮತ್ತು ನಜ್ಮಾ ನಜೀರ್‌ ಅವರು ವಂದೇ ಮಾತರಂ ಗೀತೆಯನ್ನು ಹಾಡುವಂತೆ ಒತ್ತಾಯಿಸುತ್ತಾರೆ. ನೀವು ಹಾಡಿ ನಿಮ್ಮ ಜೊತೆಗೆ ನಾವೂ ಹಾಡುತ್ತೇವೆ ಎನ್ನುತ್ತಾರೆ.

ಪ್ಲೀಸ್‌, ಪ್ಲೀಸ್‌. ನೀವು ಈ ದೇಶಕ್ಕಾಗಿ ಹಾಡಬೇಕೆಂದು ಬಯಸುತ್ತಿದ್ದೇವೆ, ವಂದೇ ಮಾತರಂ ಹಾಡಿ. ವಿಕ್ರಮ್‌ ಇದು ಸಿನಿಮಾ ಅವಕಾಶ ಇದ್ದ ಹಾಗೆ. ಝಿರೋದಿಂದ ಹೀರೋ ಆಗುವ ಅವಕಾಶ. ಇದು ಅದ್ಭುತ ಅವಕಾಶ. ಪೋಸ್ಟ್‌ ಕಾರ್ಡ್‌ನಲ್ಲಿ ಏನೇನೋ ಹಾಕುತ್ತೀರಲ್ವಾ? ಈಗ ನಿಮಗೊಂದು ಅವಕಾಶ ಸಿಕ್ಕಿದೆ. ರಾಷ್ಟ್ರ ವಿರೋಧಿಗಳಾದ ನಾವು ಕೂಡಾ ನಿಮ್ಮ ಜೊತೆಗೆ ಹಾಡುತ್ತೇವೆ. ನೀವು ಅರ್ನಬ್‌ ಗೋಸ್ವಾಮಿ ಥರ ಸೈಲೆಂಟ್‌ ಆಗಿ ಹೋದ್ರೆ ಹೇಗೆ..? ಗುಂಡು ಹಾರಿಸೋಕೆ ಹೇಳಿಕೊಡೋಕೆ ಗೊತ್ತಾಗುತ್ತೆ..? ಪ್ಲೀಸ್‌ ವಿಕ್ರಮ್‌ ಹಾಡಿ, ಇಷ್ಟೊಂದು ಕೇಳ್ಕೋಬೇಕಾ ನಿಮ್ಮನ್ನ..? ಈಗ ರಾಷ್ಟ್ರೀಯವಾದಿಗಳ ಟೈಂ. ನಿಮಗೆ ಗಾಂಧಿಯನ್ನ ಗೋಡ್ಸೆ ಕೊಂದ ಟೈಂ ಏನ್‌ ಗೊತ್ತಾ..? ನೀವು ನಮಗೆ ಫೇಸ್‌ಬುಕ್‌ನಲ್ಲಿ ಹಿಂಸೆ ಕೊಡ್ತಾ ಇರ್ತಿರಿ. ವಂದೇ ಮಾತರಂ ಹಾಡಿ ವಿಕ್ರಮ್‌..

ಎಂದು ಆ ಮೂವರು ಒತ್ತಾಯಿಸುತ್ತಾರೆ.

ಆದರೆ ಮಹೇಶ್‌ ವಿಕ್ರಮ್‌ ಹೆಗ್ಡೆ ನಗುತ್ತಲೇ ಸುಮ್ಮಿರುತ್ತಾರೆಯೇ ಹೊರತು ವಂದೇ ಮಾತರಂ ಮಾತ್ರ ಹಾಡಲ್ಲ.

ಈ ಮೂವರು ಮತ್ತು ಮಹೇಶ್‌ ವಿಕ್ರಮ್‌ ಹೆಗ್ಡೆ ನಡುವಿನ ಘಟನೆ ವಂದೇ ಮಾತರಂಗೆ ನಿಲ್ಲಲ್ಲ. ಅದರಲ್ಲೂ ನಜ್ಮಾ ಮತ್ತು ಕವಿತಾ ರೆಡ್ಡಿ ವಿಕ್ರಮ್‌ ಹೆಗ್ಡೆಗೆ ಮನುವಾದ, ಗೋಡ್ಸೆ ಮತ್ತು ಬಾಂಬರ್‌ಗಳ ಬಗ್ಗೆ ಎಲ್ಲ ಪ್ರಶ್ನೆ ಮಾಡುತ್ತಾರೆ.

1 COMMENT

LEAVE A REPLY

Please enter your comment!
Please enter your name here