ದೇಶದಲ್ಲಿ ತ್ವರಿತವಾಗಿ ಗುಣಮುಖಗೊಳ್ಳುತ್ತಿರುವ ಸೋಂಕಿತರು : ಮರಣ ಪ್ರಮಾಣ ಇಳಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 51,255 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದು ದಾಖಲೆಯ ಬಿಡುಗಡೆಯಾಗಿದ್ದು, ಇಲ್ಲಿವರೆಗೆ ಡಿಸ್ಚಾಜ್೯ ಆದ ಅತ್ಯಧಿಕ ಸಂಖ್ಯೆಯಾಗಿದೆ.

ಇದರೊಂದಿಗೆ, ಚೇತರಿಕೆ ಪ್ರಮಾಣವೂ ಶೇಕಡಾ 65.43 ಕ್ಕೆ ಏರಿದೆ. ಸಾವಿನ ಪ್ರಮಾಣ 2.13 ಕ್ಕೆ ಇಳಿದಿದೆ.

ದೇಶದಲ್ಲಿ ಈವರೆಗೆ ಒಟ್ಟು 11,45,629 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 54,735 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17,50,723 ಕ್ಕೇರಿದೆ.

ಪ್ರಸ್ತುತ ದೇಶದಲ್ಲಿರುವ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 5,67,730 ಆಗಿದೆ. ಒಂದೇ ದಿನದಲ್ಲಿ, 853 ಮಂದಿ ಮೃತಪಟ್ಟಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 37,364 ಕ್ಕೆ ತಲುಪಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here