ದೇವರು ಕೊಟ್ಟ ಶಿಕ್ಷೆಯಂತೆ ಕೊರೋನಾ

ಹರಾರೆ: ಚೀನಾದಿಂದ ಬಂದ ಮಾರಕ ಕೊರೋನಾ ವೈರಸ್‍ಗೆ ಇಡೀ ಜಗತ್ತು ತತ್ತರಿಸಿದೆ. ಐದೂವರೆ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಲಕ್ಷಾಂತರ ಮಂದಿ ಬಾಧಿತರಾಗಿದ್ದಾರೆ. ಆದರೆ, ಇದು ದೇವರು ಕೊಟ್ಟ ಶಿಕ್ಷೆ ಅಂತಿದ್ದಾರೆ ಜಿಂಬಾಬ್ವೆಯ ರಕ್ಷಣಾ ಮಂತ್ರಿ ಒಪ್ಪಾ ಮುಚಿಂಗರಿ.

ತಮ್ಮ ದೇಶದ ಮೇಲೆ ಹಲವು ನಿರ್ಬಂಧ ಹೇರಿದ ದೇಶಗಳಿಗೆ ಆ ದೇವರೇ ಕೊಟ್ಟ ಶಿಕ್ಷೆ ಎಂದು ವ್ಯಾಖ್ಯಾನಿಸಿದ್ದಾರೆ. ನಮಗೆ ಕಿರುಕುಳ ಕೊಟ್ಟ ದೇಶಗಳಲ್ಲಿ ಜನತೆ ಸದ್ಯ ಮನೆಗಳಿಗೆ ಸೀಮಿತವಾಗಿದ್ದಾರೆ. ಅವರು ನಮಗೆ ಯಾವ ರೀತಿ ಮಾಡಿದರೋ ಅದೇ ರೀತಿ ಆ ದೇಶಗಳ ಆರ್ಥಿಕತೆ ಪತನವಾಗುತ್ತಿದೆ.

ತಮಗೆ ತಾವೇ ದೇವರು ಅಂದುಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಈ ವೈರಸ್ ತಕ್ಕ ಪಾಠವನ್ನೇ ಕಲಿಸುತ್ತಿದೆ. ಕೊರೋನಾ ವೈರಸ್ ಪ್ರಭಾವದಿಂದ ಅವರು ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.ಎಲ್ಲರೊಳಗೊಂದಾಗು ಮಂಕುತಿಮ್ಮ

LEAVE A REPLY

Please enter your comment!
Please enter your name here