ದೇವರು ಒಬ್ಬನೇ ಇರೋದು, ಅನೇಕ ಇಲ್ಲ. ಆದರೆ ನಾವು ಬೇರೆ ಬೇರೆ ಹೆಸರಲ್ಲಿ ಕರ್ಕೊಂಡು ಪೂಜೆ ಮಾಡ್ತೀವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಮೊತ್ತ ಗ್ರಾಮದಲ್ಲಿ ಶನೇಶ್ವರ ದೇವಸ್ಥಾನ ಉದ್ಘಾಟಿಸಿದ ಬಳಿಕ ಮಾತಾಡಿದ ಅವರು ಬಸವಣ್ಣನನ ವಚನ ಪ್ರಸ್ತಾಪಿಸಿದ ಸಿದ್ದರಾಮಯ್ಯ
ದೇವನೊಬ್ಬ ನಾಮ ಹಲವು, ದೇವರು ಸರ್ವವ್ಯಾಪಿ. ಗುಡಿಯಲ್ಲೂ ಇದ್ದಾನೆ, ಹೊರಗೂ ಇದ್ದಾನೆ. ಹಿರಣ್ಯಕಶಿಪು ನಾಟಕ ನೋಡಿಲ್ವಾ ಹಾಗೆ ಎಲ್ಲೆಲ್ಲೂ ಇದ್ದಾನೆ. ಬಸವಣ್ಣ ಒಂದು ಮಾತು ಹೇಳ್ತಾರೆ. ಉಳ್ಳವರು ದೇಗುಲ ಮಾಡುವರು ನಾನೇನು ಮಾಡಲ್ಲಯ್ಯ. ಇದು ನಾನೇನು ಹೇಳಿದ್ದಲ್ಲ, 900ವರ್ಷದ ಹಿಂದೆ ಬಸವಣ್ಣ ಹೇಳಿದ್ದು ಎಂದು ಸಿದ್ದರಾಮಯ್ಯ ಹೇಳಿದರು.