ದೆಹಲಿ ದಂಗಲ್‌ನಲ್ಲಿ ಬಿಜೆಪಿಯನ್ನೇ ಗುಡಿಸಿ ಹಾಕುತ್ತಂತೆ ಆಪ್‌..! ನಡೆಯಲ್ಲ ಮೋದಿ ಶಾ ತಂತ್ರ

ದೆಹಲಿ ವಿಧಾನಸಭೆಗೆ ಮತದಾನ ಮುಗಿದಿದ್ದು ಹೊಸ ಸರ್ಕಾರ ಯಾರದ್ದು ಎನ್ನುವ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ 36 ಸ್ಥಾನ ಗೆಲ್ಲಬೇಕು.

ಆದರೆ ಮತದಾನ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳ ಮಹಾಪೂರವೇ ಹರಿದು ಬಂದಿದ್ದು ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ. ಆದರೆ ಎಲ್ಲೂ ಕೂಡಾ ಬಿಜೆಪಿ ಗೆಲ್ಲುತ್ತೆ ಎಂಬ ಸುಳಿವೇ ಇಲ್ಲ. ಆಮ್‌ ಆದ್ಮಿ ಪಾರ್ಟಿಗೆ ಮತದಾರ ಎರಡನೇ ಬಾರಿಯೂ ಜಯಕಾರ ಹಾಕಿದ್ದಾನೆ ಎನ್ನುವುದಷ್ಟೇ ಸಾರಾಂಶ.

ಇಲ್ಲಿಯವರೆಗಿನ ಲೆಕ್ಕಾಚಾರವನ್ನು ನೋಡೋದಾದ್ರೆ ದೆಹಲಿ ದಂಗಲ್‌ ಒನ್‌ಸೈಡ್‌ ಆಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿ ಮುಖ ನೋಡದೇ ರಾಷ್ಟ್ರರಾಜಧಾನಿಯ ಜನ ಈ ಬಾರಿಯೂ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಪೊರಕೆಯನ್ನೇ ಹಿಡಿದಿದ್ದಾರೆ. ಆದರೆ ಎಷ್ಟು ಅಂತರದಿಂದ ಆಪ್‌ ಗೆಲ್ಲುತ್ತೆ, ಕಳೆದ ವರ್ಷದ ಮೂರಕ್ಕಷ್ಟೇ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿಗೆ ಎಷ್ಟು ಸ್ಥಾನ ಜಾಸ್ತಿ ಆಗುತ್ತೆ ಎನ್ನುವುದಷ್ಟೇ ಕುತೂಹಲ.

ಚುನಾವಣೋತ್ತರ ಸಮೀಕ್ಷೆಗಳು:

ಇಂಡಿಯಾ ಟುಡೇ – ಆಕ್ಸಿಸ್‌ ಸಮೀಕ್ಷೆ:

ಆಮ್‌-ಆದ್ಮಿ ಪಾರ್ಟಿ – 59-68, ಬಿಜೆಪಿ 2-10 ಕಾಂಗ್ರೆಸ್‌ 0 (ಲೋಕಸಭಾ ಚುನಾವಣೆ ಸೇರಿದಂತೆ ಇತ್ತೀಚೆಗೆ ನಡೆದ ಚುನಾವಣೆಗಳ ಅತ್ಯಂತ ನಿಖರ ಭವಿಷ್ಯ ನುಡಿದಿರುವ ಹೆಗ್ಗಳಿಕೆ ಇಂಡಿಯಾ ಟುಡೇ-ಆಕ್ಸಿಸ್‌ಗೆ ಸೇರಿದ್ದು. ಹೀಗಾಗಿ ಈ ಸಮೀಕ್ಷೆಗಾಗಿ ಎಲ್ಲರೂ ಕಾದಿದ್ದರು. 2015ರಲ್ಲಿ ಆಪ್‌ -67, ಬಿಜೆಪಿ -3 ಕಾಂಗ್ರೆಸ್‌ ಸೊನ್ನೆ ಸುತ್ತಿತ್ತು.)

ಟಿವಿ9 ಭಾರತ್‌ವರ್ಷ್‌:

ಆಮ್‌ ಆದ್ಮಿ ಪಾರ್ಟಿ -44, ಬಿಜೆಪಿ – 26, ಕಾಂಗ್ರೆಸ್‌ – 0

ರಿಪಬ್ಲಿಕ್‌ ಟಿವಿ-ಜನ್‌ಕೀ ಬಾತ್‌:

ಆಮ್‌ ಆದ್ಮಿ ಪಾರ್ಟಿ – 48-61, ಬಿಜೆಪಿ – 9 -21, ಕಾಂಗ್ರೆಸ್‌ 0-1

ನ್ಯೂಎಕ್ಸ್‌-ಪೋಲ್‌ಸ್ಟಾರ್ಟ್‌ : 

ಆಮ್‌ ಅದ್ಮಿ ಪಾರ್ಟಿ – 50-56, ಬಿಜೆಪಿ – 10-14, ಕಾಂಗ್ರೆಸ್‌ -0

ಎಬಿಪಿ-ಸಿ ವೋಟರ್‌:

ಆಮ್‌ ಆದ್ಮಿ ಪಾರ್ಟಿ – 49-63, ಬಿಜೆಪಿ 5-19, ಕಾಂಗ್ರೆಸ್‌ 0-4

ಟೈಮ್ಸ್‌ ನೌ:

ಆಮ್‌ ಆದ್ಮಿ ಪಾರ್ಟಿ – 47, ಬಿಜೆಪಿ – 23, ಕಾಂಗ್ರೆಸ್‌ – 0

ಮೂರು ಸಮೀಕ್ಷೆಗಳಲ್ಲಿ ವ್ಯತ್ಯಾಸದ ಅಂತರ (+ ಅಥವಾ -) ದೊಡ್ಡದಿರುವುದು ಕೂಡಾ ವಿಶೇಷ. ಸಮೀಕ್ಷೆಗಳಲ್ಲಿ ಸ್ಪಷ್ಟತೆ ಸಿಗದೇ ಹೋದಾಗ ಇಷ್ಟೊಂದು ಅಂತರವಿಟ್ಟು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here