ದೆಹಲಿ ದಂಗೆ; ಎಫ್‍ಐಆರ್ ಏಕಿಲ್ಲ..? ಕೋರ್ಟ್ ಹೇಳಿದ್ದೇನು..?

ದೆಹಲಿ ಹಿಂಚಾಚಾರ ವಿಚಾರದಲ್ಲಿ ದೆಹಲಿ ಪೊಲೀಸರ ಅಸಲೀತನವನ್ನು ದೆಹಲಿ ಹೈಕೋರ್ಟ್ ಆನಾವರಣ ಮಾಡಿದೆ. ದೆಹಲಿ ದಂಗೆಗೆ ಮುನ್ನ ಪ್ರಚೊದನಕಾರಿ ಭಾಷಣ ಮಾಡಿದ ಮೂವರು ಬಿಜೆಪಿ ನಾಯಕರ ವಿರುದ್ಧ ಏಕೆ ದಾಖಲಿಸಿಲ್ಲ ಎಂದು ದೆಹಲಿ ಪೊಲೀಸರನ್ನು ಹೈಕೋರ್ಟ್ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಕೂಡಲೇ ಬಿಜೆಪಿಯ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರುದ್ಧ ಎಫ್‍ಐಆರ್ ದಾಖಲಿಸಿ ಕೋರ್ಟ್‍ಗೆ ಮಾಹಿತಿ ನೀಡುವಂತೆ ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಎಸ್‍ಎನ್ ಶ್ರೀವತ್ಸಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ನೀವು ಅವರ (ಪರ್ವೇಶ್ ವರ್ಮಾ, ಅನುರಾಗ್ ಠಾಕೂರ್, ಕಪಿಲ್ ಮಿಶ್ರಾ) ವಿರುದ್ಧ ಎಫ್‍ಐಆರ್ ದಾಖಲಿಸದೇ ಇದ್ದಲ್ಲಿ ತಪ್ಪು ಸಂದೇಶ ರವಾನೆ ಆಗುತ್ತದೆ. ಇದರಿಂದ ಅನಾಹುತಗಳಾಗುತ್ತವೆ. ಇದು ನಿಮಗೆ ಎಚ್ಚರಿಕೆ ಅಲ್ಲವಾ..? ಸಾಮಾನ್ಯ ಜನತೆ ಕೇಳುವ ಪ್ರಶ್ನೆಗಳನ್ನು ನಾವು ಕೇಳುತ್ತಿದ್ದೇವೆ. ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಎಫ್‍ಐಆರ್ ಏಕೆ ದಾಖಲಿಸಲಿಲ್ಲ.

ಸಾವುಗಳನ್ನು ಕಂಡಾಗ, ಅಂಗಡಿಗಳು ಭಸ್ಮವಾದಾಗ ಕ್ರಮಕ್ಕೆ ಮುಂದಾಗುವ ನೀವು, ಈ ಪ್ರಚೊದನಾಕಾರಿ ಭಾಷಣಗಳನ್ನು ಕೇಳಿದ ನಂತರವೂ ಏಕೆ ಕ್ರಮ ಕೈಗೊಳ್ಳಲಿಲ್ಲ.- ನ್ಯಾ.ಮುರಳೀಧರ್

 

ಎಂದು ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ, ಈ ಹಂತದಲ್ಲಿ ಸಾಲಿಸಿಟರ್ ಜನೆರಲ್ ತುಷಾರ್ ಮೆಹ್ತಾ, ಪೊಲೀಸರ ಸಮರ್ಥನೆಗೆ ಮುಂದಾದರು.

ದೂರುದಾರರ ಪರ ವಕೀಲರು, ಆಯ್ದ ಭಾಷಣಗಳ ಕ್ಲಿಪ್‍ಗಳನ್ನಷ್ಟೇ ತೋರಿಸುತ್ತಿದ್ದಾರೆ. ಆದರೆ, 50ಕ್ಕೂ ಹೆಚ್ಚು ಪ್ರಚೋದನಕಾರಿ ಭಾಷಣಗಳ ಕ್ಲಿಪ್ ನಮ್ಮ ಬಳಿ ಇವೆ. ಸೂಕ್ತ ಸಂದರ್ಭಕ್ಕಾಗಿ ನಾವು ಕಾಯುತ್ತಿದ್ದೇವೆ.

– ಸಾಲಿಸಿಟರ್ ಜನೆರಲ್ ತುಷಾರ್ ಮೆಹ್ತಾ

ಸಾಲಿಸಿಟರ್ ಜನೆರಲ್ ಉತ್ತರಕ್ಕೆ ಹೈಕೋರ್ಟ್ ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿತು. ಸೂಕ್ತ ಸಂದರ್ಭ ಅಂದರೆ ಯಾವುದು..? ನಗರ ಹೊತ್ತಿ ಉರಿಯುತ್ತಿದೆ. ಕ್ರಮ ಕೈಗೊಳ್ಳುವುದು ಯಾವಾಗ ಎಂದು ಪ್ರಶ್ನೆ ಮಾಡಿತು.

ಇನ್ನು ದೆಹಲಿ ಹೈಕೋರ್ಟ್ ನ್ಯಾಯ ಪೀಠ ದೆಹಲಿ ಹಿಂಸಾಚಾರದ ಬಗ್ಗೆ ಗಮನಿಸಿ ವ್ಯಕ್ತಪಡಿಸಿದ ಪ್ರಮುಖಾಂಶಗಳು ಇಲ್ಲಿವೆ ನೋಡಿ.

* ಈಶಾನ್ಯ ದೆಹಲಿಯ ಪರಿಸ್ಥಿತಿ ದಿನ ದಿನಕ್ಕೂ ಹದಗೆಡುತ್ತಿದೆ
* ಈವರೆಗೂ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲೇಬೇಕು.
* 1984 ಸಿಖ್ ವಿರೋಧಿ ದಂಗೆಯಂತಹ ಘಟನೆಗಳನ್ನು ಮರುಕಳಿಸೋದನ್ನು ಕೋರ್ಟ್ ಒಪ್ಪುವುದಿಲ್ಲ
* ಪ್ರತಿಯೊಬ್ಬ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬಬೇಕಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಬೇಕಿದೆ.
* ಪ್ರತಿ ಪ್ರಜೆಗೂ ಝಡ್ ಕೆಟಗರಿ ಭದ್ರತೆ ಕಲ್ಪಿಸುವ ಸನ್ನಿವೇಶ ಸೃಷ್ಟಿ ಆಗಿದೆ.
* ಗಲಭೆಯಲ್ಲಿ ಗಾಯಗೊಂಡವರಿಗೆ ಅತ್ಯುನ್ನತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು.
* ಸಿಬಿಎಸ್‍ಇ ಪರೀಕ್ಷೆಗಳ ಮುಂದೂಡಿಕೆ ಬಗ್ಗೆ ಬೋರ್ಡ್ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿ.

LEAVE A REPLY

Please enter your comment!
Please enter your name here