ದೆಹಲಿ ಚುನಾವಣಾ ಸೋಲಿನ ಬೆನ್ನಲ್ಲೇ ದೇಶದ ಜನಸಾಮಾನ್ಯರಿಗೆ ಮೋದಿ ಸಿಲಿಂಡರ್‌ ಶಾಕ್‌ – ಬೆಲೆ ಏರಿಸಿ ರೆಕಾರ್ಡ್‌

ದೆಹಲಿಯಲ್ಲಿ ಬಿಜೆಪಿಗೆ ಒಂದಂಕಿ ಸೀಟಿನೊಂದಿಗೆ ಹೀನಾಯ ಸೋಲಾದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಆಘಾತ ನೀಡಿವೆ. ಸಿಲಿಂಡರ್‌ ಬೆಲೆಯನ್ನು ಬರೋಬ್ಬರೀ 150 ರೂಪಾಯಿಯಷ್ಟು ಹೆಚ್ಚಳ ಮಾಡಿವೆ. ಹೊಸ ದರ ಇವತ್ತಿನಿಂದಲೇ ಜಾರಿಯಾಗಿದೆ.

ಇದು ಸತತ ಆರನೇ ಬೆಲೆ ಏರಿಕೆ ಆಗಿದೆ. 2019ರ ಫೆಬ್ರವರಿ ಬಳಿಕ ಸಬ್ಸಿಡಿ ರಹಿತ ಸಿಲಿಂಡರ್‌ ದರದ ಬೆಲೆ ಬರೋಬ್ಬರೀ 283 ರೂಪಾಯಿಯಷ್ಟು ಜಾಸ್ತಿ ಆಗಿದೆ.

19 ಕೆಜಿ ತೂಕದ ಸಬ್ಸಿಡಿ ಇಲ್ಲದ ಸಿಲಿಂಡರ್‌ನ ಬೆಲೆ ಇಲ್ಲಿವರೆಗೆ 1,500 ರೂಪಾಯಿಯಷ್ಟು ಹೆಚ್ಚಳವಾಗಿದೆ.

ವಿಶೇಷ ಎಂದರೆ ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ ಮತ್ತು ಡಾಲರ್‌-ರೂಪಾಯಿ ವಿನಿಮಯ ದರ ಆಧರಿಸಿ ಸಿಲಿಂಡರ್‌ ಬೆಲೆ ಹೆಚ್ಚಳದ ಮಾಸಿಕ ಪರಿಷ್ಕರಣೆಗೆ ತೈಲ ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಅಷ್ಟೇನು ಏರಿಳಿತಗಳೇ ಆಗಿಲ್ಲ.

LEAVE A REPLY

Please enter your comment!
Please enter your name here