ದೆಹಲಿಯಲ್ಲಿ ವೀಕೆಂಡ್ ಲಾಕ್ ಡೌನ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಕೊವಿಡ್ ಎರಡನೇ ಅಲೆಯ ಹೊಡೆತ ತಪ್ಪಿಸಿಕೊಳ್ಳಲು ವಿವಿಧ ರಾಜ್ಯಗಳು ಕಠಿಣ ನಿಯಮಗಳ ಮೊರೆ ಹೋಗುತ್ತಿವೆ . ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೊನಾ ತಡೆಗೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಆದೇಶ ಹೊರಡಿಸಿದ್ದಾರೆ .

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ವಾರಾಂತ್ಯದಲ್ಲಿ ಕರ್ಪ್ಯೂ ಜಾರಿಗೆ ನಿರ್ಧಾರ ಮಾಡಲಾಗಿದೆ . ಕರ್ಪ್ಯೂ ವೇಳೆ ಅಗತ್ಯ  ಸೇವೆಗಳಿಗಷ್ಟೇ ಅವಕಾಶ ಟಾಕೀಸ್‌ಗಳಲ್ಲಿ ಶೇ .30 ರಷ್ಟು ಭರ್ತಿ ಅವಕಾಶ ಮಾಲ್ , ಹೊಟೇಲ್ , ಜಿಮ್‌ಗಳು ಬಂದ್ ಹೊಟೇಲ್‌ಗಳಲ್ಲಿ ಹೋಂ ಡೆಲಿವರಿ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here