ದೆಹಲಿಯಲ್ಲಿ ಕೇಜ್ರಿವಾಲ್‌ ಗೆದ್ದರೆ ಅದು ಅಭಿವೃದ್ಧಿಯ ಗೆಲುವು – ಕಾಂಗ್ರೆಸ್‌ನಿಂದ ಅಚ್ಚರಿಯ ಹೇಳಿಕೆ

ದೆಹಲಿಯಲ್ಲಿ ಕಾಂಗ್ರೆಸ್‌ ಗೆದ್ದರೆ ಅದಕ್ಕೆ ಅಭಿವೃದ್ಧಿ ಕಾರ್ಯಗಳು ಎಂದು ಕಾಂಗ್ರೆಸ್‌ ಅಚ್ಚರಿಯ ಹೇಳಿಕೆ ನೀಡಿದೆ. ಭಾರತೀಯ ಜನತಾ ಪಾರ್ಟಿ ಸೋಲಿನೊಂದಿಗೆ ಕೋಮುವಾದಿ ಅಜೆಂಡಾ ಕೊನೆ ಆಗಲಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ನಾವು ಎಲ್ಲ ಸಾಮರ್ಥ್ಯದೊಂದಿಗೆ ಚುನಾವಣೆಯನ್ನು ಎದುರಿಸಿದ್ವಿ. ಬಿಜೆಪಿ ಕೋಮುವಾದಿ ಅಜೆಂಡಾವನ್ನು ಮುಂದಿಟ್ಟರೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅಭಿವೃದ್ಧಿ ಅಜೆಂಡಾದಲ್ಲಿ ಚುನಾವಣೆಯಲ್ಲಿ ಹೋರಾಡಿದರು. ಒಂದು ವೇಳೆ ಕೇಜ್ರಿವಾಲ್‌ ಗೆದ್ದರೆ ಅದು ಅಭಿವೃದ್ಧಿ ಅಜೆಂಡಾದ ಗೆಲುವು ಎಂದು ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.

ಎಲ್ಲ ನಾಯಕರನ್ನೂ ದೆಹಲಿಗೆ ಕರೆದುಕೊಂಡು ಬಂದ ಬಿಜೆಪಿ ಶಾಹಿನ್‌ಭಾಗ್‌ ಎಂದು ಘೋಷಣೆ ಕೂಗಿತು. ಆದರೆ ಕೇಜ್ರಿವಾಲ್‌ ಮೊಹಲ್ಲಾ ಕ್ಲಿನಿಕ್‌ ಸೇರಿದಂತೆ ಉಳಿದ ಕೆಲಸಗಳ ಬಗ್ಗೆ ಮಾತಾಡಿದರು. ಶೀಲಾ ದೀಕ್ಷಿತ್‌ ಸಿಎಂ ಆಗಿದ್ದಾಗ ದೆಹಲಿಯಲ್ಲಿ ದೀರ್ಘಾವಧಿ ಅಭಿವೃದ್ಧಿ ಆಗಿತ್ತು ಎನ್ನುವುದನ್ನು ಜನರಿಗೆ ತಿಳಿಸಲು ನಾವು ಪ್ರಯತ್ನ ಪಟ್ಟೆವು ಎಂದು ಕಾಂಗ್ರೆಸ್‌ ಲೋಕಸಭಾ ಸಂಸದ ಅಧಿರ್‌ ರಂಜನ್‌ ಚೌಧರಿ ಹೇಳಿದರು.

LEAVE A REPLY

Please enter your comment!
Please enter your name here