ದೆಹಲಿಗೆ ಚುನಾವಣೆ ಘೋಷಣೆ – ಇವತ್ತೇ ಬಹಿರಂಗ ಆದ ಸಮೀಕ್ಷೆಯಲ್ಲಿ ಗೆದ್ದವರು ಇವರು..! ಸಮೀಕ್ಷೆ ಏನ್‌ ಹೇಳುತ್ತೆ..?

ದೆಹಲಿ ವಿಧಾನಸಭಾ ಚುನಾವಣಾ ಮುಹೂರ್ತ ಘೋಷಣೆ ಆಗಿದ್ದು ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ದೆಹಲಿ ಗದ್ದುಗೆ ಯಾರಿಗೆ ಎನ್ನುವುದು ಬಹಿರಂಗವಾಗಲಿದೆ.

ದೆಹಲಿ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಹಿಂದಿ ಸುದ್ದಿವಾಹಿನಿ ಎಬಿಸಿ ನ್ಯೂಸ್‌ ನಡೆಸಿರುವ ಮತದಾನ ಪೂರ್ವ ಎಂದು ಸಮೀಕ್ಷೆ ರಾಷ್ಟ್ರರಾಜಧಾನಿ ರಾಜಕೀಯ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಎಬಿಪಿ ನ್ಯೂಸ್‌ ಮತ್ತು ಸಿ ವೋಟರ್‌ ನಡೆಸಿರುವ ಜಂಟಿ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಪ್ರಚಂಡ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೇರುವ ನಿರೀಕ್ಷೆ ಇದೆ.

ಸಮೀಕ್ಷೆಗಳ ಪ್ರಕಾರ ಒಟ್ಟು 70 ಕ್ಷೇತ್ರಗಳ ಪೈಕಿ ಆಮ್‌ ಆದ್ಮಿ ಪಾರ್ಟಿ 54 ರಿಂದ 64, ಬಿಜೆಪಿ 3 ರಿಂದ 13 ಮತ್ತು ಕಾಂಗ್ರೆಸ್‌ 0 ರಿಂದ 6 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ.

ಆಮ್‌ ಆದ್ಮಿ ಪಾರ್ಟಿ 59 ಮೂರನೇ ಎರಡಕ್ಕಿಂತಲೂ ಅಧಿಕ ಸ್ಥಾನಗಳನ್ನು ಬಾಚಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿ 8ಮತ್ತು ಕಾಂಗ್ರೆಸ್‌ 3 ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾಗಬಹುದು.

2015ರಲ್ಲಿ ಆಮ್‌ ಆದ್ಮಿ ಪಾರ್ಟಿ 67 ಸ್ಥಾನಗಳನ್ನು ಗೆದಿದ್ದರೆ, ಬಿಜೆಪಿ ಕೇವಲ 3 ಸ್ಥಾನ ಗೆದ್ದುಕೊಂಡಿತ್ತು. ಬಿಜೆಪಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ.

ಮತಗಳಿಕೆ ಪ್ರಮಾಣ:

ಇನ್ನು ಮತಗಳಿಕೆ ಪ್ರಮಾಣದ ಬಗ್ಗೆ ಸಮೀಕ್ಷೆ ಏನು ಹೇಳಿದೆ ಎಂದು ನೋಡೋದಾದ್ರೆ:

ಆಮ್‌ ಆದ್ಮಿ ಪಾರ್ಟಿ ಶೇಕಡಾ 53ರಷ್ಟು, ಬಿಜೆಪಿ ಕೇವಲ ಶೇಕಡಾ 26ರಷ್ಟು, ಕಾಂಗ್ರೆಸ್‌ ಬರೀ ಶೇಕಡಾ 5ರಷ್ಟು ಮತಗಳಿಸುವ ಸಾಧ್ಯತೆಗಳಿವೆ.

ಯಾರು ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿ..?

ಇನ್ನು ದೆಹಲಿಯಲ್ಲಿ ಯಾರು ಮುಖ್ಯಮಂತ್ರಿ ಆದರೆ ಒಳ್ಳೆದು ಎಂಬ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಎಲ್ಲರನ್ನೂ ಹಿಂದಿಕ್ಕಿ ಮುಂಚೂಣಿಯಲ್ಲಿದ್ದಾರೆ.

ಸಮೀಕ್ಷೆಗಳ ಪ್ರಕಾರ ಶೇಕಡ 70ರಷ್ಟು ಮಂದಿ ಅರವಿಂದ್‌ ಕೇಜ್ರಿವಾಲ್‌ರನ್ನ ಒಪ್ಪಿಕೊಂಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ಸದ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ಹರ್ಷವರ್ಧನ್‌ರನ್ನು ಕೇವಲ ಶೇಕಡಾ 11ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ. ದೆಹಲಿ ಕಾಂಗ್ರೆಸ್‌ ನಾಯಕ ಅಜಯ್‌ ಮಕೇನ್‌ ಪರ ಶೇಕಡಾ 7ರಷ್ಟು ಮಂದಿಗಷ್ಟೇ ಒಲಿವಿದ್ದರೆ, ದೆಹಲಿ ಬಿಜೆಪಿ ಅಧ್ಯಕ್ಷ, ಸಂಸದ ಮನೋಜ್‌ ತಿವಾರಿ ಪರ ಶೇಕಡಾ 1ರಷ್ಟೇ ಓಕೆ ಎಂದಿದ್ದಾರೆ.

ನಿನ್ನೆಯಷ್ಟೇ ದೆಹಲಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಧಾನಿ ಮೋದಿ ಹೆಸರಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದಿದ್ದರು.

ಇತ್ತ ಇವತ್ತು ಚುನಾವಣಾ ದಿನಾಂಕ ಘೋಷಣೆ ಆದ ಬಳಿಕ ಟ್ವೀಟಿಸಿರುವ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದು ಕೆಲಸದ ಆಧಾರದ ಮೇಲೆ ನಡೆಯುವ ಚುನಾವಣೆ ಎಂದಿದ್ದಾರೆ.

LEAVE A REPLY

Please enter your comment!
Please enter your name here