ದುಡ್ಡನ್ನ ಹೀಗೂ ಕದ್ದೊಯ್ಯಬಹುದಾ..? – ಈ ವೀಡಿಯೋ ನೋಡಿದ್ರೆ ಶಾಕ್‌ ಆಗುತ್ತೆ..!

ವಿಮಾನಗಳ ಮೂಲಕ ದಂಧೆಕೋರರು ಅಕ್ರಮ ವಸ್ತುಗಳ ಸಾಗಾಟಕ್ಕೆ ದಂಧೆಕೋರರು ಹುಡುಕುವ ದಾರಿ ಒಂದೆರಡಲ್ಲ. ಚಿನ್ನ, ಅಫೀಮು, ಗಾಂಜಾ, ಬ್ರೌನ್‌ ಶುಗರ್‌ ಹೀಗೆ ಒಂದೋ ಎರಡೋ. ಒಬ್ಬರದ್ದು ಒಂದೊಂದು ದಾರಿ.

ಹೀಗೆ ವಿದೇಶದ ಕರೆನ್ಸಿಗಳನ್ನು ಕದ್ದು ಸಾಗಿಸ್ತಿದ್ದ ಗುಂಪನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಇವರು ಆ ಕರೆನ್ಸಿಯನ್ನು ಸಾಗಿಸ್ತಿದ್ದಿದ್ದು ಯಾವುದರಲ್ಲಿ ಗೊತ್ತಾ..?, ಬಡವರ ಬಾದಾಮಿಯೆಂದೇ ಕರೆಸಿಕೊಳ್ಳುವ ನೆಲಗಡಲೆಯಲ್ಲಿ.

ಹೌದು ನೆಲಗಡಗಲೆಯ ಸಿಪ್ಪೆಯನ್ನು ಸುಳಿದು ಅದರೊಳಗಿರುವ ಕಡಲೆಬೀಜವನ್ನು ತೆಗೆಯುತ್ತಾರೆ. ಬಳಿಕ ವಿದೇಶಿ ಕರೆನ್ಸಿಗಳನ್ನು ಆ ಸಿಪ್ಪೆಯೊಳಗೆ ಹೊಂದಿಕೊಳ್ಳುವಂತೆ ಅತೀ ಚಿಕ್ಕದಾಗಿ ಮಡಚಿ ಅದರೊಗಿಟ್ಟು ಎರಡೂ ಸಿಪ್ಪೆಗಳನ್ನು ಅಂಟಿಸಿಬಿಡ್ತಾರೆ. ನೋಡಿದ್ರೆ ಇದು ಇನ್ನೂ ಬಿಡಿಸದ ನೆಲಗಡಲೆ ಎಂದೇ ಭಾವಿಸ್ಬೇಕು.

ಚೀಲದ ತುಂಬೆಲ್ಲ ಇದ್ದ ನೆಲಗಡಲೆಯ ಬೆಲೆ ಎಷ್ಟು ಗೊತ್ತಾ..? 45 ಲಕ್ಷ ರೂಪಾಯಿ. ಇಷ್ಟು ಮೊತ್ತದ ವಿದೇಶಿ ಕರೆನ್ಸಿಯಲ್ಲಿ 2 ಲಕ್ಷದ 22 ಸಾವಿರದ 500 ರೂಪಾಯಿ ಮೊತ್ತದ 445 ಸೌದಿ ರಿಯಲ್‌ ನೋಟು ಕೂಡಾ ಇತ್ತು.

LEAVE A REPLY

Please enter your comment!
Please enter your name here