ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಹಾಗೂ ಅವರ ಕುಟುಂಬಕ್ಕೆ ಕೊರೋನಾ ಸೋಂಕು ದೃಢವಾಗಿದೆ.
ಒಂದು ವಾರದ ಹಿಂದೆ ದೀಪಿಕಾ ಪಡುಕೋಣೆಯ ತಾಯಿ ಉಜ್ಜಾಲ ಹಾಗೂ ತಂಗಿ ಅನಿಶಾ ಅವರಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಆಗ ಅವರಿಗೆ ಕೊರೋನಾ ಸೋಂಕು ಇರುವ ಬಗ್ಗೆ ದೃಢವಾಗಿತ್ತು. ಇವರಿಬ್ಬರೂ ಮನೆಯಲ್ಲಿಯೇ ಐಸೋಲೇಷಸನ್ಗೆ ಒಳಗಾಗಿದ್ದಾರೆ.
ದೀಪಿಕಾ ಪಡುಕೋಣೆಯವರ ತಂದೆ ಪ್ರಕಾಶ್ ಅವರಿಗೂ ಕೊರೋನಾ ದೃಢಪಟ್ಟಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆಯವರಿಗೂ ಸಹ ಸೋಂಕು ದೃಢವಾಗಿದೆ. ಇವರೂ ಸಹ ಹೋಂ ಐಸೋಲೇಷನ್ಗೆ ಒಳಗಾಗಿದ್ದಾರೆ.