ದಿನಗೂಲಿ ನೌಕರರಿಗೆ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್!

ಕರ್ನಾಟಕ ರಾಜ್ಯದ ದಿನಗೂಲಿ ನೌಕರರಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಗಿಫ್ಟ್‌ ನೀಡಿದ್ದು ನೌಕರರ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 75 ರಿಂದ ಶೇಕಡಾ 90 ರವರೆಗೆ ಸರ್ಕಾರದಿಂದ ದರ ಪರಿಷ್ಕರಣೆ ಮಾಡಿ ಆದೇಶ.

ಡಿಸೆಂಬರ್‌ 1 ರಿಂದಲೇ ಈ ಪೂರ್ವಾನ್ವಯವಾಗುವಂತೆ ದಿನಗೂಲಿ ನೌಕರರು  ಶೇಕಡಾ 90 ರ ಅನುಸಾರವಾಗಿ ತುಟ್ಟಿಭತ್ಯೆ ಹಾಗೂ ಮನೆ ಭತ್ಯೆಯನ್ನು ಪಡೆಯಲಿದ್ದಾರೆ.

ಈ ಹಿನ್ನಲೆಯಲ್ಲಿ ಹಿಂದೆ 75% ನೀಡುತ್ತಿದ್ದ ತುಟ್ಟಿ ಭತ್ಯೆ 90% ಗೆ ಹೆಚ್ಚಳವಾಗಿದ್ದು ಮತ್ತು ಮನೆ ಬಾಡಿಗೆಯೂ ಕೂಡಾ 75% ನಿಂದ 90% ಗೆ ಹೆಚ್ಚಳವಾದ ಹಾಗೆ ಆಗಿದೆ.

LEAVE A REPLY

Please enter your comment!
Please enter your name here