ತ್ರಿವರ್ಣ ಪತಾಕೆಯೇ ತಾನಾಗಿ.. ದೇಶಭಕ್ತಿ ತೋರಿಸಿದ ವಿಕಲಚೇತನ

ವಾಟ್ಸಪ್ ವಂಡರ್ ಬಾಕ್ಸ್ ನಿಂದ ಮತ್ತೊಂದು ಮುತ್ತನ್ನು ಹೊರ ತೆಗೆದಿದ್ದಾರೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ.

ಎರಡು ಕಾಲು ಇಲ್ಲದ ದಿವ್ಯಾಂಗರೊಬ್ಬರು ತ್ರಿವರ್ಣ ಧ್ವಜದ ಟೀ ಶರ್ಟ್ ಧರಿಸಿ ಕಂಬವನ್ನು ಚಕಚಕ ಹತ್ತುತ್ತಾರೆ. ಕಂಬದ ಮೇಲ್ತುದಿಯಲ್ಲಿ ತ್ರಿವರ್ಣಧ್ವಜವಾಗುತ್ತಾರೆ.

ಕೇವಲ 13 ಸೆಕೆಂಡ್‍ಗಳ ವಿಡಿಯೋ ನೋಡುಗರ ಗಮನ ಸೆಳೆಯುತ್ತದೆ. ಸ್ಫೂರ್ತಿ ನೀಡುತ್ತದೆ. ದೊಡ್ಡ ದೊಡ್ಡ ಕೆಲಸ ಮಾಡಲು ದೊಡ್ಡವರೇ ಬೇಕಿಲ್ಲ. ಮನಸ್ಸು ಇರಬೇಕಷ್ಟೇ. ಒಳ್ಳೆಯ ಮನಸ್ಸುಗಳನ್ನು ನೆನಪಿಸಿಕೊಳ್ಳಲು ತಡ ಏಕೆ ಎಂದು ವಿಡಿಯೋ ಶೇರ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here