ತುಳುವಿನಲ್ಲಿ ಬಿಸು ಹಬ್ಬಕ್ಕೆ ಶುಭಾಶಯ ಕೋರಿ ತುಳುವರ ಮನಗೆದ್ದ ಮುಖ್ಯಮಂತ್ರಿ ಬಿಎಸ್‌ವೈ

ಹಿಂದೂ ಪಂಚಾಂಗಗಳ ಪ್ರಕಾರ ಇಂದು ಹೊಸ ವರ್ಷದ ಮೊದಲ ದಿನ.ತುಳುನಾಡಿನಲ್ಲಿ೦ದು ‘ಬಿಸು’ ಹಬ್ಬ (ಸೌರಮಾನ ಯುಗಾದಿ). ಮೂಡೆ ಅಥವಾ ಕೊಟ್ಟಿಗೆ, ಉದ್ದಿನ ದೋಸೆ,ಸೌತೆ ಹುಳಿ ಪದಾರ್ಥ, ಕಡ್ಲೆ ಕಾಳು ಸಾರು, ತೊ೦ಡೆಕಾಯಿ ಪಲ್ಯ, ಕಡ್ಲೆ ಬೇಳೆ/ಹೆಸರು ಕಾಳು ಪಾಯಸ ತಿಂದು ಸಂಭ್ರಮದಿಂದ ಬಿಸು ಹಬ್ಬವನ್ನು ಆಚರಿಸಬೇಕಾದ ಇಂದು ಎಲ್ಲೆಡೆ ಕೊರೋನಾದ ಕರಾಳ ಛಾಯೆ ಆವರಿಸಿದೆ. ಎಲ್ಲರೂ ತಮ್ಮ ಮನೆಯಲ್ಲೇ ಸರಳವಾಗಿ ʼಬಿಸುʼ ಹಬ್ಬ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಜನರಿಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ʼಬಿಸುʼ ಹಬ್ಬದ ಶುಭಾಶಯ ಕೋರಿದ್ದಾರೆ.

ಕರಾವಳಿಗರಿಗೆ ತುಳುವಿನಲ್ಲಿಯೇ ಬಿಸು ಹಬ್ಬದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್‌ ವೈ- ಬಿಸುತ ದಿನ ಪೊಸತ್ ಮನಸ್, ಪೊಸತ್ ಕನಸ್ ಪೊಸತ್ ತೆನಸ್, ಮಾತಲಾ ಪೊಸತ್ ಪೊಸತ್ ಆವಡ್  ಪೊಸ ವರ್ಷೊಡು ಪರತ್ ಮಹಾಮಾರಿ  ದೂರ ಅದ್ ಸುಖ ಸಂತೋಸ ನೆಲೆಸಡ್. ಮಾತೆರೆಗ್ ಬಿಸುತ ಸುಭಾಸುಯೊಲು ( ಯುಗಾದಿ ದಿನ ಹೊಸ ಮನಸ್ಸು, ಹೊಸ ಕನಸು, ಹೊಸ ಊಟ, ಎಲ್ಲವೂ ಹೊಸತಾಗಿರಲಿ. ಹೊಸ ವರ್ಷದಲ್ಲಿ ಹಳೆ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು) ಎಂದಿದ್ದಾರೆ.

 

ಇವತ್ತು ತುಳು ನಾಡಿನಲ್ಲಿ(ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ತುಳುನಾಡು ಎ೦ದು ಪರಿಗಣಿಸಲ್ಪಡುತ್ತವೆ) ಬಿಸು ಪರ್ಬ ಅಥವಾ ವಿಷು ಹಬ್ಬ(ತುಳುವಿನಲ್ಲಿ ಪರ್ಬ ಎ೦ದರೆ ಹಬ್ಬ). ‘ಸೌರಮಾನ ಯುಗಾದಿ’ ಎ೦ತಲೂ ಕರೆಯಲ್ಪಡುವ ಈ ದಿನ ನೆರೆಯ ಕೇರಳ ಹಾಗೂ ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಿಗಳಿಗೂ ಹೊಸ ವರ್ಷ… ಬಂಗಾಳಿಗಳು ಪೊಯ್ಲ ಬೈಸಾಖಿ ( ಮೊದಲ ಸಂಕ್ರಮಣ) ಅಂತ ಆಚರಿಸುತ್ತಾರೆ .

LEAVE A REPLY

Please enter your comment!
Please enter your name here