ತಾಯಂದಿರು, ಸಹೋದರಿಯರ ಆಶೀರ್ವಾದ ಇರೋವರೆಗೆ ನನ್ನನ್ನು ಏನೂ ಮಾಡಲಾಗದು – ಪ್ರಧಾನಿ ಮೋದಿ ತಿರುಗೇಟು

ಉದ್ಯೋಗ ಸಿಗದೇ ಹೋದರೆ ಆರು ತಿಂಗಳಲ್ಲಿ ನಿಮಗೆ ಬಡಿಗೆಯಿಂದ ಹೊಡೆಯುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನವೂ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂ ರಾಜ್ಯದ ಕೊಕ್ರಾಝರ್‌ನಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತಾಡಿದ ಮೋದಿ,

ತಾಯಂದಿರು ಮತ್ತು ಸಹೋದರಿಯರು ನನ್ನನ್ನ ಆಶೀರ್ವಾದಿಸಲು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ. ಹಲವರು ನನಗೆ ದೊಣ್ಣೆಯಿಂದ ಹೊಡೆಯಬೇಕೆಂದು ಹೇಳುತ್ತಿದ್ದಾರೆ. ಈ ಮೋದಿ ಯಾರು ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದಿಂದ ರಕ್ಷಿಸಲ್ಪಟ್ಟಿದ್ದಾನೋ ಆತನಿಗೆ ಯಾವ ದೊಣ್ಣೆಯೂ ಏನೂ ಮಾಡಲಾರದು

ಎಂದು ವಾಗ್ದಾಳಿ ನಡೆಸಿದ್ದಾರೆ. ಬೋಡೋ ಒಪ್ಪಂದದ ಹಿನ್ನೆಲೆಯಲ್ಲಿ ಕೊಕ್ರಾಝರ್‌ನಲ್ಲಿ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here