ತಾಜ್ ಮಹಲ್ ಸೇರಿದಂತೆ ದೇಶದ ಎಲ್ಲಾ ಮ್ಯೂಸಿಯಂಗಳು ಮುಚ್ಚಲಿವೆ.

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ಮತ್ತು ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಡುವ ಎಲ್ಲಾ ಮ್ಯೂಸಿಯಂ ಹಾಗೂ ಸ್ಮಾರಕಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಮಂತ್ರಿ ಪ್ರಲ್ಹಾದ್ ಸಿಂಗ್ ಪಟೇಲ್ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ರಕ್ಷಣೆಯಲ್ಲಿರುವ ಹಾಗೂ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಎಲ್ಲಾ  ಮ್ಯೂಸಿಯಂ ಮತ್ತು ಸ್ಮಾರಕಗಳನ್ನು ಮೇ 15 ರ ವರೆಗೆ ಮುಚ್ಚಲಾಗುವುದು. ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಆದೇಶವು ಮೇ 15 ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಜಾರಿಯಲ್ಲಿರಲಿದೆ.

 

 

LEAVE A REPLY

Please enter your comment!
Please enter your name here