’ತಲೈವಿ’ ಟೀಸರ್, ಫಸ್ಟ್ ಲುಕ್ ರಿಲೀಸ್!

ಸಿನಿಮಾರಂಗ ಮತ್ತು ರಾಜಕೀಯ ರಂಗದಲ್ಲಿ ಸಮಾನವಾಗಿ ಖ್ಯಾತಿ ಪಡೆದವರು ಜಯಲಲಿತಾ. ಸದ್ಯ ಅವರ ಬಯೋಪಿಕ್ ‘ತಲೈವಿ‘ಗೆ ಬಿರುಸಿನ ಕೆಲಸಗಳು ನಡೆಯುತ್ತಿವೆ.ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ಮಾಡುವುದಕ್ಕೆ ನಿರ್ದೇಶಕ ಎ.ಎಲ್. ವಿಜಯ್‌ ವರ್ಷಗಳಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

 

ಜಯಲಲಿತಾ ಅವರ ಪಾತ್ರಕ್ಕೆ ಜೀವ ತುಂಬುವ ಆ ನಟಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಆ ಕುತೂಹಲಕ್ಕೆಲ್ಲಾ ಈಗ ತೆರೆ ಬಿದ್ದಿದೆ. ಬಾಲಿವುಡ್‌ “ಕ್ವೀನ್” ಕಂಗನಾ ರಣೌತ್‌ ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ಹೇಗೆ ಕಾಣಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ‘ತಲೈವಿ’ಯ ಫಸ್ಟ್ ಟೀಸರ್ ರಿಲೀಸ್‌ ಆಗಿದ್ದು, ಈ ಟೀಸರ್ ನಲ್ಲಿ ಕಂಗನಾ ನಟಿ ಮತ್ತು ರಾಜಕಾರಣಿಯಾಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಹಾಗೆಯೇ ಟೀಸರ್ ನೋಡಿದ ನೆಟ್ಟಿಗರು ಮೆಚ್ಚುಗೆಯ ಜೊತೆ ಗೇಲಿಯನ್ನೂ ಮಾಡಿದ್ದಾರೆ. ಈ ಸಿನಿಮಾವು ೩ ಭಾಷೆಯಲ್ಲಿ ಏಕಕಾಲಕ್ಕೆ  ೨೦೨೦ ಜೂನ್ ೨೬ ರಂದು ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here