ತಬ್ಲಿಘಿಗಳ ವಿರುದ್ಧ ಮಾತಾಡುವ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುವುದೇ ನನ್ನ ಪ್ರಥಮ ಆದ್ಯತೆ – ಯಡಿಯೂರಪ್ಪಗೆ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ತಿರುಗೇಟು

ಮಹಾಮಾರಿ ಕೊರೋನಾ ವೈರಸ್‌ ವಿಷಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಬಗ್ಗೆ ಒಂದೇ ಒಂದು ಮಾತಾಡಿದರೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಎಚ್ಚರಿಕೆ ವಿರುದ್ಧ ಬಿಜೆಪಿ ಶಾಸಕರು, ಸಂಸದರೇ ತಿರುಗಿಬಿದಿದ್ದಾರೆ.

ತಬ್ಲೀಘಿ ಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇದೆ ನನ್ನ ಪ್ರಥಮ ಆದ್ಯತೆ.

ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಟ್ವೀಟಿಸಿದ್ದಾರೆ.

ಇನ್ನು ಉತ್ತರ ಕನ್ನಡ ಬಿಜೆಪಿ ಅನಂತ್‌ಕುಮಾರ್‌ ಹೆಗಡೆಯವರಂತೂ ಪರೋಕ್ಷವಾಗಿ ಸಿಎಂ ಯಡಿಯೂರಪ್ಪಗೆ ಚುಚ್ಚಿದ್ದಾರೆ.

ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ?

ಎಂದು ಹೇಳುವ ಮೂಲಕ ಕೊರೋನಾ ವಿಷಯದಲ್ಲಿ ಮುಸ್ಲಿಮರನ್ನು ಯಾರೂ ಟಾರ್ಗೆಟ್‌ ಮಾಡಬಾರದು ಎಂದು ಸಿಎಂ ಯಡಿಯೂರಪ್ಪ ಹೇಳಿದ ಮಾತಿಗೆ ತಿರುಗೇಟು ನೀಡಿದ್ದಾರೆ

LEAVE A REPLY

Please enter your comment!
Please enter your name here