ತಬ್ಲಿಘಿಗಳಿಂದ ಕರ್ನಾಟಕದ ನೆಮ್ಮದಿ ಹಾಳು – ಮುಖ್ಯಮಂತ್ರಿ ಯಡಿಯೂರಪ್ಪ

ಕರ್ನಾಟಕದಲ್ಲಿ ಕೊರೋನಾ ವೈರಸ್ ಹರಡುವಿಕೆಯ ವೇಗ ಮುಖ್ಯಮಂತ್ರಿ ಯಡಿಯೂರಪ್ಪನ್ನು ಕಂಗೆಡಿಸಿದೆ. ತಬ್ಲಿಘಿ ಹಾವಳಿಯಿಂದ ಕರ್ನಾಟಕದ ನೆಮ್ಮದಿ ಹಾಳಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನಿಜಾಮುದ್ದಿನ್ ತಬ್ಲಿಘಿಗಳ ಹಾವಳಿ ಇಲ್ಲದೇ ಹೋಗಿದ್ದರೆ ಕರ್ನಾಟಕದಲ್ಲಿ ಈ ವೇಳೆಗೆ ಕೊರೊನಾ ವೈರಸ್ ಹುಟ್ಟಡಗಿಸುತ್ತಿದ್ದೆವು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕನ್ನಡ ದೈನಿಕ ವಿಜಯ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಅವರು 

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಅನ್ನುವ ಕಳಕಳಿ ಮತ್ತು ಕಾಳಜಿಯಿಂದ, ತಬ್ಲಿಘಿ ಹಾವಳಿಯನ್ನು ಮಟ್ಟ ಹಾಕುವ ಹಾದಿಯಲ್ಲಿ ಸರಕಾರ ದುರುದ್ದೆಶದಿಂದ ನಡೆದುಕೊಂಡಿದೆ ಎಂದು ಯಾರೂ ದೂರಬಾರದು ಎನ್ನುವ ದೃಷ್ಟಿಯಿಮದ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು. ಮುಸ್ಲಿಮ್ ನಾಯಕರ ಜೊತೆ ಸಮಾಲೋಚನೆ ನಡೆಸಿದೆ. ಮುಸ್ಲಿಮ್ ನಾಯಕರ ಸಲಹೆ-ಸೂಚನೆಗಳನ್ನು ಗೌರವಿಸಿದ್ದೆ. ಕೆಲವೇ ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯದ ವಿರುದ್ಧ ದ್ವೇಷ ಸಾಧಿಸುವುದನ್ನು ಸಹಿಸಲ್ಲ ಎಂದಿದ್ದೆ.

ನನ್ನ ಈ ಮಾತುಗಳನ್ನು ಯಾರಾದರೂ ದೌರ್ಬಲ್ಯ ಎಂದು ಭಾವಿಸಿದ್ದರೆ ಅದು ನಿಜಕ್ಕೂ ತಪ್ಪು. ಓಲೈಕೆ ಎಂದು ಯಾರಾದರೂ ಭಾವಿಸಿದ್ದರೆ ಅಂಥವರನ್ನು ಮುಗ್ಧರು ಎಂದು ಭಾವಿಸುತ್ತೇನೆ. ಸ್ವೇಚ್ಛಾಚಾರದಿಂದ ವರ್ತಿಸುವವರು ಯಾರೇ ಆಗಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿಯೇ ಇರಲಿ ಅಂತಹವರನ್ನು ಕಾನೂನು ಪ್ರಕಾರ ಮಟ್ಟ ಹಾಕಲು ನಾನು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಕೆಲವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ದಾಂಧಲೆ ನಡೆಸಿರುವುದು, ಅಟ್ಟಹಾಸದಿಂದ ಮೆರೆದಿರುವುದು ಅಕ್ಷಮ್ಯ ಅಪರಾಧ. ಪ್ರತಿಯೊಬ್ಬ ವ್ಯಕ್ತಿಯ ಜೀವ ಕಾಪಾಡಲು ಕಂಕಣಬದ್ಧರಾಗಿರುವ ವೈದ್ಯಕೀಯ ಮತ್ತು ಪೆÇಲೀಸ್ ಪಡೆಗೆ ಕೊಲೆ ಬೆದರಿಕೆಯೊಡ್ಡಿರುವುದನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂಥ ಗೂಂಡಾಗಿರಿಗೆ ಕಡಿವಾಣ ಹಾಕಲು ನನ್ನ ಸರಕಾರ ಬದ್ಧವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ದುಷ್ಟ ಶಕ್ತಿಗಳ ಹುಟ್ಟಡಗಿಸಲು ನನ್ನ ಸರಕಾರ ಹಿಂಜರಿಯುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here