ಇಡೀ ಜಗತ್ತಿಗೆ ಡೆಡ್ಲಿ ವೈರಸ್ ಹಬ್ಬಿಸಿ ನೆರೆಹೊರೆಯ ರಾಷ್ಟ್ರಗಳ ಕೆಂಗಣಿಗೆ ಗುರಿಯಾಗಿರುವ ಚೀನಾ ವಿರುದ್ಧ ವಿಶ್ವದ್ಯಾಂತ ಘೋಷಣೆಗಳು ಕೇಳಿ ಬರುತ್ತಿವೆ.
ಚೀನಾ ಆ್ಯಪ್ ಗಳನ್ನು ನಿಷೇಧಿಸುವ ಮೂಲಕ ಡ್ರಾಗನ್ ಗೆ ಎದುರೇಟು ನೀಡಿದ ಭಾರತದೊಂದಿಗೆ ಇತರೆ ನೆರೆಹೊರೆ ರಾಷ್ಟ್ರಗಳು ಬುದ್ಧಿ ಕಲಿಸಲು ಮುಂದಾಗಿದ್ದು, ಅಮೆರಿಕ, ಮ್ಯಾನ್ಮಾರ್ನಿಂದ ತರಾಟೆಗೆ ಗುರಿಯಾದ ಚೀನಾಗೆ ಈಗ ಜಪಾನ್ ಕೂಡ ತಕ್ಕ ಶಾಸ್ತಿ ಮಾಡಲು ಮುಂದಾಗಿದೆ.
2008ರ ನಂತರ ಮೊದಲ ಬಾರಿಗೆ ಜಪಾನ್ ಭೇಟಿ ನೀಡಲು ನಿರ್ಧರಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ನೋ ಎಂಟ್ರಿ ಬೋರ್ಡ್ ತೂಗು ಹಾಕಿದ್ದು, ಜಿನ್ಪಿಂಗ್ಗೆ ಭೇಟಿ ರದ್ದು ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಕಷ್ಟ ಕಾಲವನ್ನೇ ಲಾಭಕ್ಕೆ ಬಳಸಿಕೊಂಡು, ಆಕ್ರಮಣಕಾರಿ ನೀತಿ ಪ್ರದರ್ಶಿಸುತ್ತಿರುವ ಚೀನಾವನ್ನು ದೂರವಿಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೇ ಬಂದಿದ್ದಾರೆ.
ಜಪಾನ್ನ ಜಲಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾ ಧೋರಣೆಯನ್ನು ಖಂಡಿಸುತ್ತಿರುವ ಅಬೇ ಅವರ ಲಿಬರಲ್ ಡೆಮಾಕ್ರಾಟಿಕ್ ಪಕ್ಷ ಜಿನ್ಪಿಂಗ್ ಭೇಟಿಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದೆ.