ಡ್ರೈವರ್ ಜೊತೆ ಸೈನಿಕನ ಪತ್ನಿ ಅಕ್ರಮ ಸಂಬಂಧ.. ಜಲಪಾತದಲ್ಲಿ ಶವ.. ಮಿಸ್ಟರಿ ಬಯಲಾಗಿದ್ದು ಹೀಗೆ..!

ಒಂದು ಕಡೆ ಗಂಡ ದೇಶಕ್ಕಾಗಿ ಗಡಿಯಲ್ಲಿ ಪ್ರಾಣ ಪಣಕ್ಕಿಟ್ಟು ಕಾವಲು ಕಾಯುತ್ತಿದ್ರೆ, ಮತ್ತೊಂದು ಕಡೆ ಆದರ್ಶವಾಗಿ ಇರಬೇಕಿದ್ದ ಯೋಧನ ಪತ್ನಿ ಮಾತ್ರ ಅಡ್ಡದಾರಿ ಹಿಡಿದಿದ್ದಳು. ಮನೆಯಲ್ಲಿ ಪತಿ ಇಲ್ಲದ ಕಾರಣ ಸ್ವೇಚ್ಛಾಚಾರಿಯಾಗಿ ಬದಲಾಗಿ, ಪರಪುರುಷನ ಸಂಗ ಮಾಡಿದ್ದಳು. ಇಷ್ಟಕ್ಕೆ ಸುಮ್ಮನಾಗದೇ ತನ್ನ ಸುಖಕ್ಕೆ ಅಡ್ಡಿ ಆಗುತ್ತಾರೆ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯ ಪ್ರಾಣ ತೆಗೆದಳು. ಇದು ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ.

ಇನ್ನು ಆರು ತಿಂಗಳಲ್ಲಿ ಮನೆಗೆ..

ಬೆಳಗಾವಿ ತಾಲೂಕಿನ ಮಾರಿಹಾಳದ ಯೋಧ ದೀಪಕ್ ಪಟ್ಟಣದಾರ್ (32) ಹಲವು ವರ್ಷದಿಂದ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ವರ್ಷದ ಹಿಂದೆ ಅಂಜಲಿ ಜೊತೆ ವಿವಾಹ ಆಗಿತ್ತು. ಒಂದು ಮುದ್ದಾದ ಮಗು ಕೂಡ ಹುಟ್ಟಿತ್ತು. ದೀಪಕ್ ಆರು ತಿಂಗಳಿಗೊಮ್ಮೆ ಮನೆಗೆ ಬಂದು ಪತ್ನಿ ಜೊತೆ 10 ದಿನ ಕಾಲ ಕಳೆದು ಸೇನೆಗೆ ವಾಪಸ್ ಆಗುತ್ತಿದ್ದರು. ಪತ್ನಿಗೆ ಕಷ್ಟ ಆಗಬಾರದು ಎನ್ನುವ ಕಾರಣಕ್ಕೆ ಮನೆ ಕಟ್ಟಿಸಿ, ಕಾರೊಂದನ್ನು ಕೊಡಿಸಿ, ಅದಕ್ಕೆ ಪ್ರಶಾಂತ್ ಎಂಬುವನನ್ನು ಚಾಲಕನ ಕೆಲಸಕ್ಕೆ ಬಿಟ್ಟಿದ್ದರು.

ಡ್ರೈವರ್ ಜೊತೆ ಅಕ್ರಮ ಸಂಬಂಧ

ಡ್ಯೂಟಿ ಮೇಲೆ ಚಾಲಕ ಪ್ರಶಾಂತ್, ನಿತ್ಯ ಯೋಧನ ಮನೆಗೆ ಬರುತ್ತಿದ್ದ. ಅಂಜಲಿ ಒಬ್ಬಂಟಿಯಾಗಿ ಇದ್ದ ಕಾರಣ ಇಬ್ಬರ ನಡುವೆ ಗೆಳೆತನ ಏರ್ಪಟ್ಟು ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಪತಿ ಇಲ್ಲದ ಕಾರಣ, ಅಂಜಲಿ ಯಾವುದೇ ಅಡ್ಡಿ ಆತಂಕ ಇಲ್ಲದೇ, ಚಾಲಕನ ಜೊತೆ ರಾಸಲೀಲೆ ನಡೆಸಿದ್ದಳು. ಈ ಹಂತದಲ್ಲೇ ಮನೆಗೆ ವಾಪಸ್ ಆದ ಯೋಧ ದೀಪಕ್, ಇನ್ನಾರು ತಿಂಗಳಲ್ಲಿ ನಿವೃತ್ತಿ ತೆಗೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಸೇರುತ್ತೇನೆ ಎಂದು ಪತ್ನಿಗೆ ತಿಳಿಸಿದ್ದರು.

ಪತಿಯನ್ನು ತೊಲಗಿಸಿಕೊಳ್ಳಲು ಪ್ಲಾನ್

ಗಂಡ ತನ್ನ ಜೊತೆಯೇ ಇದ್ದರೇ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸೋದು ಕಷ್ಟ ಎಂದು ಭಾವಿಸಿದ ಅಂಜಲಿ, ಗಂಡನನ್ನು ಶಾಶ್ವತವಾಗಿ ದೂರ ಮಾಡಿಕೊಳ್ಳಲು ಪ್ಲಾನ್ ಮಾಡಿದಳು. ಪ್ಲಾನ್ ಭಾಗವಾಗಿ ಪತಿಯನ್ನು ಜನವರಿ 28ರಂದಯ ಗೋಕಾಕ್ ಬಳಿ ಜಲಪಾತ ನೋಡೋಣ ಎಂದು ಕಾರಲ್ಲಿ ಕರೆದೊಯ್ದಳು. ಜೊತೆಯಲ್ಲಿ ಚಾಲಕ ಪ್ರಶಾಂತ್ ಇದ್ದ. ಅಲ್ಲಿ ದೀಪಕ್‍ಗೆ ಅತಿಯಾಗಿ ಮದ್ಯ ಕುಡಿಸಿ ಕತ್ತು ಹಿಸುಕಿ ಸಾಯಿಸಿಬಿಟ್ಟರು. ನಂತರ ಪ್ರಶಾಂತ್ ಸ್ನೇಹಿತರಾದ ನವೀನ್, ಪ್ರವೀಣ್ ನೆರವಿನಿಂದ ದೀಪಕ್ ಮೃತದೇಹವನ್ನು ಜಲಪಾತದಿಂದ ಕೆಳಕ್ಕೆ ತಳ್ಳಿದ್ದರು.

ಗಂಡನನ್ನು ಕೊಂದು ಹೊಸ ನಾಟಕ

ಗಂಡನನ್ನು ಕೊಂದು ಬಂದ ಅಂಜಲಿ, ನಂತರ ಹೊಸ ನಾಟಕ ಶುರು ಮಾಡಿಕೊಂಡಿದ್ದಳು. ಫೆಬ್ರವರಿ 4ರಂದು ಮಾರಿಹಾಳ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಅಲ್ಲದೇ, ತನ್ನ ದೂರಿಗೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಠಾಣೆ ಮುಂದೆ ಧರಣಿ ನಡೆಸಿದ್ದಳು. ಅಷ್ಟೊತ್ತಿಗೆ ಆಗಲೇ, ತನಿಖೆ ಶುರು ಮಾಡಿಕೊಂಡಿದ್ದ ಪೊಲೀಸರು, ದೀಪಕ್ ಮೊಬೈಲ್ ನಂಬರ್ ಆಧಾರವಾಗಿಟ್ಟುಕೊಂಡು, ಆತ ಕೊನೆಯ ಬಾರಿ ಜಲಪಾತದ ಬಳಿ ಇದ್ದುದನ್ನು ಗುರುತಿಸಿದ್ದರು. ಆ ಪ್ರಾಂತ್ಯದಲ್ಲಿ ತನಿಖೆ ಮಾಡಿದಾಗ, ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪಕ್ಷಿಗಳು, ಮೀನುಗಳು ತಿಂದುಳಿದ ಶವವೊಂದು ಪತ್ತೆ ಆಯ್ತು.

ಹಿಡಿದುಕೊಟ್ಟಿದ್ದು ಸೆಲ್‍ಫೋನ್ ಸಿಗ್ನಲ್

ಯೋಧ ದೀಪಕ್‍ರನ್ನುಕೊಲೆ ಮಾಡಿ ನೀರಿನಲ್ಲಿ ಹಾಕಿರಬಹುದು ಎಂದು ಅನುಮಾನಿಸಿದ ಪೊಲೀಸರು, ಮೊಬೈಲ್ ಸಿಗ್ನಲ್ಸ್ ಆಧಾರವಾಗಿ ಅಂಜಲಿ ಮತ್ತು ಪ್ರಶಾಂತ್ ಮೇಲೆ ಅನುಮಾನಗೊಂಡು, ಇಬ್ಬರನ್ನು ವಶಕ್ಕೆ ಪಡೆದು ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಹತ್ಯೆ ಮಾಡಿದ್ದು ತಾವೆ ಅಂತಾ ಒಪ್ಪಿಕೊಂಡರು. ಕೂಡಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಲ್ಲಿರುವ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

LEAVE A REPLY

Please enter your comment!
Please enter your name here