ಡಿ ಕೆ ಶಿವಕುಮಾರ್‌ ಯಾವೆಲ್ಲ ದೇವಸ್ಥಾನ ಕಟ್ಟಿಸಿದ್ದಾರೆ ಗೊತ್ತಾ..?

ಸ್ವಕ್ಷೇತ್ರ ಕನಕಪುರದಲ್ಲಿರುವ ಕಪಾಲಿ ಬೆಟ್ಟದಲ್ಲಿ ಏಸುವಿನ ಪ್ರತಿಮೆ ಸ್ಥಾಪನೆಗೆ ಸರ್ಕಾರಿ ಭೂಮಿಯನ್ನು ಖರೀದಿಸಿ ಕೊಟ್ಟಿದ್ದರ ಸಂಬಂಧ ಬಿಜೆಪಿ ಮತ್ತು ಹಿಂದೂ ಸಮುದಾಯದ ಮುಖಂಡರಿಂದ ಟೀಕೆಗೆ ಗುರಿ ಆಗಿರುವ ಡಿ ಕೆ ಶಿವಕುಮಾರ್‌ ತಾವು ವೈಯುಕ್ತಿಕವಾಗಿ ಹಿಂದೂ ಧರ್ಮದ ದೇವಸ್ಥಾನಗಳಿಗೆ ಕೊಟ್ಟ ಸಹಾಯವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಕನಕಪುರದಲ್ಲಿ ಸರ್ಕಾರಿ ಶಾಲೆಗಳಿಗೆ ಕುಟುಂಬದ ಭೂಮಿಯನ್ನು ಕೊಟ್ಟಿದ್ದೇವೆ. ಕನಕಪುರದಲ್ಲಿ ನೂರಾರು ದೇವಸ್ಥಾನಗಳನ್ನು ಕಟ್ಟಿಸಿ ಕೊಟ್ಟಿದ್ದೇವೆ. ಎಲ್ಲ ಧರ್ಮದವರಿಗೂ ಸಹಾಯ ಮಾಡಿದ್ದೇವೆ. ಬೆಂಗಳೂರಲ್ಲೂ ರಾಮನ ದೇವಸ್ಥಾನ ಕಟ್ಟಿದ್ದೇವೆ. ಮಂಗಳಗೌರಿ ಮಾರಮ್ಮ ದೇವಸ್ಥಾನಕ್ಕೆ ಜಾಗ ಕೊಟ್ಟಿದ್ದೇವೆ. ಆ ಒಂದೂವರೆ ಎಕರೆ ಜಾಗಕ್ಕೆ ಈಗ ೪೫ ಕೋಟಿ ರೂಪಾಯಿ. ಎಸ್‌ ಎಂ ಕೃಷ್ಣ ಮುಖ್ಯಮಂತ್ರಿ ಆದಾಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಮೈಸೂರಲ್ಲಿರುವ ಚಾಮುಂಡಿ ವಿಹಾರ ಸ್ಟೇಡಿಯಂಗೆ ಭೂಮಿ ಕೊಟ್ಟಿದ್ದು ನಾನೇ. ಮಹಾರಾಣಿಯವರಿಂದ ಭೂಮಿ ಖರೀದಿಸಿ ದಾನವಾಗಿ ಕೊಟ್ಟಿದ್ದೇನೆ. ಈ ಬಗ್ಗೆ ದಾಖಲೆಗಳಿವೆ. ಆದರೆ ಪ್ರಚಾರ ಗಿಟ್ಟಿಸಿಕೊಳ್ಳಲ್ಲ ಎಂದು ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

 

LEAVE A REPLY

Please enter your comment!
Please enter your name here