ಡಿಸಿಎಂ ಹುದ್ದೆ ಆಕಾಂಕ್ಷಿ ಶ್ರೀರಾಮುಲು ವಿರುದ್ಧ ʼಭೂʼ ಪ್ರಕರಣ

ಬಳ್ಳಾರಿ ಹೊರವಲಯದಲ್ಲಿ ಬೆಲೆಬಾಳುವ ಜಮೀನು ಕಬಳಿಸಿದ ಆರೋಪಕ್ಕೊಳಗಾಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು  ವಿರುದ್ಧ “ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ” ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

2008 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀರಾಮುಲು ಕೌಲ್‌ ಬಜಾರ್‌ ಪ್ರದೇಶದಲ್ಲಿ ೫೭ ಎಕರೆ  ಸರ್ಕಾರಿ ಮತ್ತು ಖಾಸಾಗಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಅವರು ಸಂಪುಟ ದರ್ಜೆ ಸಚಿವರಾಗಿದ್ದರು. 

ನಿವೇಶನ ಕಳೆದುಕೊಂಡಿರುವ ಹಿರಿಯ ನಾಗರೀಕ ಜಿ.ಕೃಷ್ಣಮೂರ್ತಿ ಅವರು ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಲ್ಲಿ ಖಾಸಾಗಿ ದೂರು ದಾಖಲಿಸಿದ್ದರು.ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೋಲೀಸರಿಗೆ ನಿರ್ದೇಶಿಸಿತ್ತು.

 

 

LEAVE A REPLY

Please enter your comment!
Please enter your name here